15 ಕ್ರಮಗಳನ್ನು ಅ.15ರೊಳಗೆ ಜಾರಿಗೆ ತರಲು ಬಿಸಿಸಿಐಗೆ ಲೋಧಾ ಸಮಿತಿ ಸೂಚನೆ

ಮಂಗಳವಾರ, 9 ಆಗಸ್ಟ್ 2016 (19:31 IST)
ಸುಪ್ರೀಂಕೋರ್ಟ್‌ನಿಂದ ನೇಮಿತವಾದ ನ್ಯಾ. ಆರ್‌ಎಂ ಲೋಧಾ ಸಮಿತಿ ಮಂಗಳವಾರ ಬಿಸಿಸಿಐಗೆ 15 ಹಂತಗಳ ಸುಧಾರಣೆಯನ್ನು ಅಕ್ಟೋಬರ್ 15ರೊಳಗೆ ಜಾರಿಗೆ ತರುವಂತೆ ನಿಖರವಾಗಿ ತಿಳಿಸಿದೆ. ಸಂವಿಧಾನಿಕ ಸುಧಾರಣೆಗಳಿಂದ ಹಿಡಿದು ಟಿವಿ ಹಕ್ಕುಗಳು ಸೇರಿದಂತೆ ವಿವಿಧ ಗುತ್ತಿಗೆಗಳನ್ನು ನೀಡುವುದರಲ್ಲಿನ ನಿಯಮಗಳು ಇದರಲ್ಲಿ ಸೇರಿದೆ.

ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಸಮಿತಿಯ ಸದಸ್ಯರನ್ನು ಭೇಟಿ ಮಾಡಿ, ಅಧ್ಯಕ್ಷ ಅನುರಾಗ್ ಠಾಕುರ್ ಪರವಾಗಿ ಪತ್ರವನ್ನು ಒಯ್ದಿದ್ದರು. ಠಾಕುರ್ ಸಂಸತ್ತಿನ ಕಲಾಪವಿರುವುದರಿಂದ ತಮ್ಮ ಗೈರುಹಾಜರಿಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 
 
 ಆಗಸ್ಟ್ 25ರೊಳಗೆ ಸಮಿತಿಗೆ ಕೈಗೊಂಡ ಕ್ರಮಗಳ ಮೊದಲ ಪಾಲನೆ ವರದಿಯನ್ನು ಸಲ್ಲಿಸುವುದಾಗಿ ಗೌರವ ಕಾರ್ಯದರ್ಶಿ ಅಜಯ್ ಶಿರ್ಕೆ ಸಮಿತಿಗೆ ಮಾಹಿತಿ ನೀಡಿದ್ದಾರೆಂದು ಲೋಧಾ ಸಮಿತಿಗೆ ಸಮೀಪದ ಮೂಲ ತಿಳಿಸಿದೆ. 
 
ಸಂಸ್ಥೆಯ ನಿವೇದನ ಪತ್ರ, ರಾಜ್ಯ ಕ್ರಿಕೆಟ್ ಸಂಸ್ಥೆಗಳ ಸಂವಿಧಾನ, ಗುತ್ತಿಗೆಗಳನ್ನು ನೀಡುವ ನಿಯಮಗಳಲ್ಲಿ ತಿದ್ದುಪಡಿಗಳನ್ನು ಕೈಗೊಳ್ಳಬೇಕಾದ ಕ್ರಮಗಳಲ್ಲಿ ಉಲ್ಲೇಖಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ