ಸಿಡ್ನಿ: ಇಂದು ಸಿಡ್ನಿಯಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಭಾರತ ಅಮೋಘ ಜಯವನ್ನು ಗಳಿಸಿತು. ಇನ್ನೂ ವಿರಾಟ್ ಕೊಹ್ಲಿ ಈ ಪಂದ್ಯದ ಮೂಲಕ ಮತ್ತೇ ಆಟಕ್ಕೆ ಮರಳಿದ್ದಾರೆ. ಇನ್ನೂ ಪಂದ್ಯ ಮುಗಿದು ವಾಪಾಸ್ಸಾಗುತ್ತಿದ್ದಾಗ ವಿರಾಟ್ ಕೊಹ್ಲಿ ನಡೆ ಕ್ರಿಕೆಟ್ ಗೆಲುವಿಗಿಂತ ಹೆಚ್ಚಾಗಿ ಅಭಿಮಾನಿಗಳ ಮನಸ್ಸನ್ನು ಗೆದ್ದಿತು.
ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್‌ಸಿಜಿ) ನಲ್ಲಿ ನಡೆದ 3 ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಜಯಗಳಿಸಿ, ವಿರಾಟ್ ಡ್ರೆಸ್ಸಿಂಗ್ ರೂಂ ಗೆ ವಾಪಾಸ್ಸಾಗುತ್ತಿದ್ದಾಗ ಸ್ಟ್ಯಾಂಡ್‌ನಲ್ಲಿ ಆಕಸ್ಮಿಕವಾಗಿ ಅಭಿಮಾನಿಯಿಂದ ಬಿದ್ದ ಭಾರತದ ಧ್ವಜವನ್ನು ನೆಲದಿಂದ ಎತ್ತಿ, ಅಭಿಮಾನಿಗೆ ವಾಪಾಸ್ ನೀಡಿದ್ದಾರೆ. ಈ ಮೂಲಕ ವಿರಾಟ್ ಮತ್ತೇ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಅಲ್ಲೇ ಇದ್ದ ಅಭಿಮಾನಿಗಳು, ವಿರಾಟ್ ನಡೆ ಕಂಡು ಜೋರಾಗಿ ಕೂಗಿದರು.
ಈ ಕ್ಷಣದ ವೀಡಿಯೊ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಅರಿವು ಮತ್ತು ನಮ್ರತೆಯನ್ನು ಶ್ಲಾಘಿಸಿದ್ದಾರೆ.
ರೋಹಿತ್ ಅವರ ಶತಕ ಮತ್ತು ಕೊಹ್ಲಿ ಅವರ 70 ರನ್‌ಗಳ ನೇತೃತ್ವದಲ್ಲಿ ಭಾರತವು ಪ್ರಬಲವಾದ ಗೆಲುವನ್ನು ಸಾಧಿಸಿದ ಸ್ಮರಣೀಯ ರಾತ್ರಿಯ ಕೊನೆಯಲ್ಲಿ ಭಾವನಾತ್ಮಕ ಕ್ಷಣವು ಬಂದಿತು. ಇದು ಕೇವಲ ಕ್ರಿಕೆಟ್ ಗೆಲುವಿಗಿಂತ ಹೆಚ್ಚಾಗಿತ್ತು - ಇದು ಭಾವನೆ, ಪರಂಪರೆ ಮತ್ತು ಹೆಮ್ಮೆಯ ರಾತ್ರಿಯಾಗಿದ್ದು, ಭಾರತೀಯ ಧ್ವಜದ ಕಡೆಗೆ ಕೊಹ್ಲಿಯ ಗೌರವದ ಕ್ರಿಯೆಯಿಂದ ಸಂಪೂರ್ಣವಾಗಿ ಸಂಕ್ಷೇಪಿಸಲಾಗಿದೆ.