IND vs AUS: ಏನು ಡೆಡಿಕೇಷನ್ ಗುರೂ.. ಕೈಗೆಲ್ಲಾ ಗಾಯ ಮಾಡಿಕೊಂಡು ಆಡಿದ ರೋಹಿತ್ ಶರ್ಮಾ

Krishnaveni K

ಗುರುವಾರ, 23 ಅಕ್ಟೋಬರ್ 2025 (11:28 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾರದ್ದು ಏನು ಡೆಡಿಕೇಷನ್ ಎನ್ನುವುದಕ್ಕೆ ವೈರಲ್ ಆಗಿರುವ ಈ ಫೋಟೋವೇ ಸಾಕ್ಷಿ.

ಇಂದು ತಂಡ ಸಂಕಷ್ಟದಲ್ಲಿದ್ದಾಗ ಹೇಗೆ ಬ್ಯಾಟ್ ಮಾಡಬೇಕು ಎಂದು ಹೇಳಿಕೊಟ್ಟಿದ್ದಲ್ಲದೆ ಅರ್ಧಶತಕ ಹೊಡೆದು ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ ಹೆಗ್ಗಳಿಕೆ ರೋಹಿತ್ ಶರ್ಮಾರದ್ದು. ಒಟ್ಟು 97 ಎಸೆತ ಎದುರಿಸಿದ ಅವರು 73 ರನ್ ಗಳಿಸಿ ಔಟಾಗಿದ್ದಾರೆ.

ಒಂದು ಹಂತದಲ್ಲಿ 10 ಓವರ್ ಗೆ 30 ರನ್ ಗಳಿಗೆ ಒದ್ದಾಡುತ್ತಿದ್ದ ಭಾರತ ರೋಹಿತ್ ಆಟದಿಂದ ಚೇತರಿಕೆ ಕಂಡಿದೆ. ರೋಹಿತ್ ಗೆ ಇದು ಮಾಡು ಇಲ್ಲವೇ ಮಡಿ ಸರಣಿ. ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಅವರು ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾರೆ. ಇದಕ್ಕಾಗಿಯೇ ಅವರು ಈ ಸರಣಿಗೆ ಎಲ್ಲರಿಗಿಂತ ಮೊದಲೇ ನೆಟ್ಸ್ ಗೆ ಬಂದು ಕಠಿಣ ಅಭ್ಯಾಸ ನಡೆಸುತ್ತಿದ್ದರು. ಅದು ಇಂದಿನ ಅವರ ಇನಿಂಗ್ಸ್ ನಲ್ಲಿ ಕಂಡುಬಂದಿದೆ.

ಒಂದು ಹಂತದಲ್ಲಿ ಅವರು ರನ್ ಗಳಿಸುವಾಗ ರನೌಟ್ ಆಗುವ ಅಪಾಯದಲ್ಲಿದ್ದರು. ಈ ವೇಳೆ ಕ್ರೀಸ್ ತಲುಪಲು ಅವರು ಡೈವ್ ಹೊಡೆಯಬೇಕಾಯಿತು. ಆಗ ಅವರ ಕೈಗೆ ಗಾಯವಾಗಿದೆ. ಆದರೆ ಗಾಯವನ್ನೂ ಲೆಕ್ಕಿಸದೇ ಆಡಿದ್ದಾರೆ. ಅವರ ಕೈ ಗಾಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದ್ದು ಜನರು ಏನು ಡೆಡಿಕೇಷನ್ ಎಂದು ಕೊಂಡಾಡಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ 30 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 51 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ