IND vs AUS: ಮೈದಾನದಲ್ಲೇ ನಿವೃತ್ತಿಯ ಸೂಚನೆ ನೀಡಿದ್ರಾ ವಿರಾಟ್ ಕೊಹ್ಲಿ: ವೈರಲ್ ಆದ ವಿಡಿಯೋ

Krishnaveni K

ಗುರುವಾರ, 23 ಅಕ್ಟೋಬರ್ 2025 (10:28 IST)
Photo Credit: X
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲೂ ಶೂನ್ಯಕ್ಕೆ ಔಟಾದ  ವಿರಾಟ್ ಕೊಹ್ಲಿ ಮೈದಾನದಿಂದ ತೆರಳುವಾಗ ನಿವೃತ್ತಿಯ ಸೂಚನೆ ನೀಡದ್ರಾ? ಅವರ ಈ ಒಂದು ಸನ್ನೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಾದರೂ ಮಿಂಚಬಹುದು ಎಂದು ಅಭಿಮಾನಿಗಳು ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ಕೊಹ್ಲಿ ಎರಡನೇ ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗಿದ್ದಾರೆ.

ಔಟಾದ ಬೆನ್ನಲ್ಲೇ ಕೊಹ್ಲಿ ಮುಖದಲ್ಲಿ ತೀವ್ರ ಬೇಸರದ ಛಾಯೆ ಕಾಣಿಸಿತ್ತು. ಜೊತೆಗೆ ತಮ್ಮಗ್ಲೌಸ್ ಗಳನ್ನು ಕಳಚಿ ಕೈಯಲ್ಲಿ ಹಿಡಿದುಕೊಂಡು ಅದೇ ಕೈಯಿಂದ ಅಭಿಮಾನಿಗಳತ್ತ ಬೈ ಎಂಬಂತೆ ಸನ್ನೆ ಮಾಡಿದ್ದಾರೆ.

ಶೂನ್ಯಕ್ಕೆ ಔಟಾದರೂ ಪೆವಿಲಿಯನ್ ಗೆ ಮರಳುವಾಗ ಬ್ಯಾಟ್ ಮೇಲೆತ್ತಿ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಎಲ್ಲಾ ಸನ್ನಿವೇಶಗಳನ್ನು ನೋಡುವಾಗ ಕೊಹ್ಲಿ ನಿವೃತ್ತಿಯ ಸೂಚನೆ ನೀಡಿದರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಕೊಹ್ಲಿಯ ಒಂದೊಂದು ಕ್ಷಣವನ್ನೂ ಮೈದಾನದಲ್ಲಿ ಎಂಜಾಯ್ ಮಾಡೋಣ. ಅವರು ಯಾವುದೇ ಕ್ಷಣದಲ್ಲೂ ನಿವೃತ್ತಿ ಘೋಷಿಸಬಹುದು ಎಂದು ಅಭಿಪ್ರಾಯಪಡುತ್ತಿದ್ದಾರೆ.


End is very-very near guys, cherish each and every moment of Virat kohli in this tour.???? #ViratKohli???? #INDvsAUS pic.twitter.com/e4GIzSfUgY

— निशांत सिंह भूमिहार (हिंदू) (@SINGHNISHANTT99) October 23, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ