IND vs BAN: ಟೀಂ ಇಂಡಿಯಾದ ಮೊದಲ ಪಂದ್ಯ ಇಂದು, ಎಲ್ಲಿ ಲೈವ್ ವೀಕ್ಷಿಸಬೇಕು

Krishnaveni K

ಗುರುವಾರ, 20 ಫೆಬ್ರವರಿ 2025 (09:34 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಇಂದು ಟೀಂ ಇಂಡಿಯಾ ಮೊದಲ ಪಂದ್ಯವನ್ನು ಆಡಲಿದ್ದು, ಎಲ್ಲಿ ಲೈವ್ ವೀಕ್ಷಿಸಬೇಕು ಇಲ್ಲಿದೆ ವಿವರ.

ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಎರಡನೇ ದಿನವಾದ ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಭಾರತ ಆಡುವ ಎಲ್ಲಾ ಪಂದ್ಯಗಳೂ ಇಲ್ಲಿ ನಡೆಯಲಿವೆ.

ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದ ಭಾರತ ಈಗ ಅದೇ ಉತ್ಸಾಹದಿಂದ ಕಣಕ್ಕಿಳಿಯುತ್ತಿದೆ.  ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯ ಸೋತರೂ ಮುಂದಿನ ಹಾದಿ ಕಷ್ಟವಾಗಲಿದೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆಯಿಡಬೇಕು.

ಈ ಚಾಂಪಿಯನ್ಸ್ ಟ್ರೋಫಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಪಾಲಿಗೆ ಕೊನೆಯ ಐಸಿಸಿ ಟೂರ್ನಿಯಾಗಿರಬಹುದು. ಹೀಗಾಗಿ ಈ ಮೂವರು ಸ್ಟಾರ್ ಗಳ ಪಾಲಿಗೆ ಇದು ವಿಶೇಷವಾಗಿರಲಿದೆ. ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾಗೆ ಈಗ ಚಾಂಪಿಯನ್ಸ್ ಟ್ರೋಫಿಯನ್ನೂ ಗೆಲ್ಲುವ ಕನಸಿದೆ. ಹಾಗೆ ನೋಡಿದರೆ ಬಾಂಗ್ಲಾದೇಶ ಕಠಿಣ ಎದುರಾಳಿಯಲ್ಲ. ಹೀಗಾಗಿ ಟೀಂ ಇಂಡಿಯಾದ ಪ್ರಸಕ್ತ ಫಾರ್ಮ್ ಗಮನಿಸಿದರೆ ಇಂದು ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ ಸ್ಟಾರ್ ಆಪ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ