Champions Trophy: ಭಾರತೀಯ ಧ್ವಜ ಹಾಕದೇ ಅವಮಾನ, ನಿಮ್ಮ ಜೆರ್ಸಿ ಮೇಲೆ ನಮ್ಮ ಹೆಸರು ಎಂದು ಪಾಕಿಸ್ತಾನ ಫ್ಯಾನ್ಸ್ ಕುಹುಕ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಭಾರತ ಆಡುವ ಪಂದ್ಯಗಳನ್ನು ಬಿಟ್ಟರೆ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ಪಂದ್ಯ ನಡೆಯುವ ಮೈದಾನದಲ್ಲಿ ಈಗ ಎಲ್ಲಾ ರಾಷ್ಟ್ರಗಳ ಧ್ವಜ ಹಾರಿಸಲಾಗಿದೆ. ಆದರೆ ಇಲ್ಲಿ ಭಾರತೀಯ ಧ್ವಜವನ್ನು ಮಾತ್ರ ಕೈ ಬಿಡಲಾಗಿದೆ. ಈ ಮೂಲಕ ಭಾರತಕ್ಕೆ ಪಾಕಿಸ್ತಾನ ಅವಮಾನ ಮಾಡಿದೆ.
ಇನ್ನೊಂದೆಡೆ ಪಾಕಿಸ್ತಾನ ಫ್ಯಾನ್ಸ್ ಟೀಂ ಇಂಡಿಯಾಕ್ಕೆ ಅವಮಾನ ಮಾಡುತ್ತಿದ್ದಾರೆ. ಐಸಿಸಿ ನಿಯಮದಂತೆ ಎಲ್ಲಾ ತಂಡಗಳೂ ಜೆರ್ಸಿ ಮೇಲೆ ಆತಿಥ್ಯ ವಹಿಸುತ್ತಿರುವ ದೇಶದ ಹೆಸರು ಹಾಕಿಕೊಳ್ಳಬೇಕು. ಅದರಂತೆ ಭಾರತ ತಂಡದ ಜೆರ್ಸಿಯಲ್ಲೂ ಪಾಕಿಸ್ತಾನದ ಹೆಸರಿದೆ.
ಇದನ್ನು ನೋಡಿ ಕೆಲವು ಕಿಡಿಗೇಡಿ ಅಭಿಮಾನಿಗಳು, ನಿಮ್ಮ ಜೆರ್ಸ ಮೇಲೆ ನಿಮ್ಮ ಅಪ್ಪನ ಹೆಸರು ಹಾಕಿಕೊಂಡಿದ್ದೀರಿ ಎಂದು ಕುಹುಕವಾಡಿದ್ದಾರೆ. ಮೊದಲು ನಮ್ಮ ದೇಶದ ಹೆಸರು ಹಾಕಿಕೊಳ್ಳದೇ ಇಲ್ಲ ಎಂದಿದ್ದರು. ಈಗ ಹಾಕಿಕೊಂಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.