IND vs ENG: ಬಾಝ್ ಬಾಲ್ ಆಟ ತೋರಿಸು ನೋಡೋಣ.. ಜೋ ರೂಟ್ ಕೆಣಕಿದ ಸಿರಾಜ್: ವಿಡಿಯೋ
ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಬಾಝ್ ಬಾಲ್ ಶೈಲಿ (ಆಕ್ರಮಣಕಾರೀ ಬ್ಯಾಟಿಂಗ್ ಶೈಲಿ) ಯಲ್ಲಿ ಆಡುತ್ತಾ ಬಂದಿದೆ. ಈ ಮಾದರಿಯಿಂದ ಅನೇಕ ಬಾರಿ ಗೆಲುವನ್ನೂ ಕಂಡಿದೆ. ಆದರೆ ಭಾರತದ ಎದುರು ಮಾತ್ರ ಇಂಗ್ಲೆಂಡ್ ನ ಬಾಝ್ ಬಾಲ್ ಶೈಲಿ ಆಟ ಪರಿಣಾಮಕಾರಿಯಾಗಿಲ್ಲ.
ಇದೇ ಕಾರಣಕ್ಕೆ ಇಂಗ್ಲೆಂಡ್ ಈ ಪಂದ್ಯದಲ್ಲಿ ತನ್ನ ಹಳೆಯ ಶೈಲಿಯಲ್ಲಿ ಆಡುತ್ತಿದೆ. ಟೆಸ್ಟ್ ಶೈಲಿಗೆ ತಕ್ಕಂತೇ ಬ್ಯಾಟಿಂಗ್ ಮಾಡುತ್ತಿದೆ. ಆದರೆ ಇದನ್ನಿಟ್ಟುಕೊಂಡು ಮೈದಾನದಲ್ಲಿ ಸಿರಾಜ್ ಎದುರಾಳಿ ಬ್ಯಾಟಿಗ ಜೋ ರೂಟ್ ರನ್ನು ಕೆಣಕಿದ್ದಾರೆ.
ಬೌಲಿಂಗ್ ಮಾಡಿದ ಬಳಿಕ ಸ್ಟ್ರೈಕರ್ ಎಂಡ್ ನಲ್ಲಿದ್ದ ಜೋ ರೂಟ್ ಬಳಿ ಬಂದ ಸಿರಾಜ್, ಬಾಝ್ ಬಾಝ್ ಬಾಝ್ ಬಾಲ್. ಬಾಝ್ ಬಾಲ್ ಆಟ ತೋರಿಸು, ನಾನು ನೋಡಬೇಕು ಎಂದು ಸಿರಾಜ್ ಕೆಣಕಿದ್ದಾರೆ. ಇನ್ನು ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಇದೂ ಕೂಡಾ ಕಳೆದ ಪಂದ್ಯದಂತೇ ಸಪಾಟೆ ಪಿಚ್ ಎನಿಸುತ್ತಿದೆ.