IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

Sampriya

ಶನಿವಾರ, 5 ಜುಲೈ 2025 (19:37 IST)
Photo Credit X
ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 2 ನೇ ಟೆಸ್ಟ್‌ನ 4 ನೇ ದಿನದಂದು ಭಾರತದ ಉಪನಾಯಕ ರಿಷಬ್ ಪಂತ್ ಬೃಹತ್ ದಾಖಲೆಯನ್ನು ಮುರಿದಿದ್ದಾರೆ. ಕೆಎಲ್ ರಾಹುಲ್ ಔಟಾದ ನಂತರ, ಪಂತ್ ಇಂಗ್ಲೆಂಡ್ ವೇಗಿ ಜೋಶ್ ಟಂಗ್ ಅವರನ್ನು ಸಿಕ್ಸರ್‌ ಹೊಡೆದರು. ಈ ಮೂಲಕ ವಿದೇಶದಲ್ಲಿ ಅತೀ ಹೆಚ್ಚು ಸಿಕ್ಸರ್‌ ಅನ್ನು ಸಿಡಿಸಿದ ಖ್ಯಾತಿಗೆ ಭಾಜನರಾಗಿದ್ದಾರೆ. 

ಪಂತ್ ಈಗ ವಿದೇಶದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಹೊಂದಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ನಲ್ಲಿ 21ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಅವರು ಸಿಡಿಸಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನು
ಬರೆದಿದ್ದಾರೆ. ವಿದೇಶದಲ್ಲಿ ಯಾವುದೇ ಬ್ಯಾಟರ್‌ನಿಂದ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಖ್ಯಾತಿ ಇದೀಗ ರಿಷಭ್ ಪಂತ್‌ಗೆ ಸಲ್ಲುತ್ತದೆ. 

ದಕ್ಷಿಣ ಆಫ್ರಿಕಾದಲ್ಲಿ ಬೆನ್ ಸ್ಟೋಕ್ಸ್ ಅವರ 21 ಸಿಕ್ಸರ್‌ ಅನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಅದನ್ನು ರಿಷಭ್ ಪಂತ್ ಮುರಿದಿದ್ದಾರೆ. 

ರಿಷಬ್ ಪಂತ್ ಮೈದಾನಕ್ಕೆ  ಬಂದಾಗ ಅವರ ಅಭಿಮಾನಿಗಳಿಗೆ ಯಾವತ್ತೂ ನಿರಾಸೆ ಮೂಡಿಸಿಲ್ಲ. ಅದು ಬ್ಯಾಟಿಂಗ್ ಇರಲಿ, ಫೀಲ್ಡಿಂಗ್ ಇರಲಿ ಏನಾದರೂ ಮ್ಯಾಜಿಕ್ ಮಾಡೇ ಮಾಡುತ್ತಾರೆ. ಅದಲ್ಲದೆ ತಮ್ಮ ವ್ಯಕ್ತಿತ್ವದ ಮೂಲಕನೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. 

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ 2 ನೇ ಟೆಸ್ಟ್‌ನ 4 ನೇ ದಿನದಂದು, ಪಂತ್ ವಿಶ್ವ ದಾಖಲೆಯನ್ನು ಮುರಿದರು. ಪಂತ್ ಈಗ ವಿದೇಶದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಹೊಂದಿದ್ದಾರೆ. ಅವರು ಈಗ ಇಂಗ್ಲೆಂಡ್‌ನಲ್ಲಿ 23 ಸಿಕ್ಸರ್‌ಗಳನ್ನು ಹೊಂದಿದ್ದಾರೆ. ಇದು ಈ ಹಿಂದೆ  ದಕ್ಷಿಣ ಆಫ್ರಿಕಾದಲ್ಲಿ 21 ಸಿಕ್ಸರ್‌ಗಳನ್ನು ಬಾರಿಸಿರುವ ಹಿಂದಿನ ದಾಖಲೆ ಹೊಂದಿರುವ ಬೆನ್ ಸ್ಟೋಕ್ಸ್‌ಗಿಂತ ಎರಡು ಹೆಚ್ಚು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ