IND vs ENG: ರಿಷಭ್ ಪಂತ್ ಬದಲು ಧ್ರುವ ಜ್ಯುರೆಲ್ ಬ್ಯಾಟ್ ಮಾಡಬಹುದೇ, ನಿಯಮವೇನು
ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಚೆಂಡು ಹಿಡಿಯುವ ಯತ್ನದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡರು. ತೀವ್ರ ನೋವಿಗೊಳಗಾದ ಅವರು ಮೈದಾನ ತೊರೆದರು. ಬಳಿಕ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ.
ಆದರೆ ಅವರು ಕೀಪಿಂಗ್ ಮಾಡುವ ಸ್ಥಿತಿಯಲ್ಲಿಲ್ಲ ಎಂಬ ಕಾರಣಕ್ಕೆ ಧ್ರುವ ಜ್ಯುರೆಲ್ ಕೀಪರ್ ಆಗಿ ಕಣಕ್ಕಿಳಿದಿದ್ದಾರೆ. ಆದರೆ ಧ್ರುವ ಜ್ಯುರೆಲ್ ಗೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಂಡು ಬ್ಯಾಟಿಂಗ್ ಗೆ ಮರಳದೇ ಇದ್ದರೆ ಭಾರತಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಅವರ ಬದಲಿಗೆ ಬೇರೊಬ್ಬರು ಬ್ಯಾಟಿಂಗ್ ಮಾಡುವಂತಿಲ್ಲ.
ನಿಯಮಗಳ ಪ್ರಕಾರ ಕೀಪರ್ ಗಾಯಗೊಂಡರೆ ಆತನ ಬದಲಿಗೆ ಅಂಪಾಯರ್ ಅನುಮತಿ ಪಡೆದು ಇನ್ನೊಬ್ಬ ಆಟಗಾರ ಕೀಪಿಂಗ್ ಮಾಡಬಹುದು. ಆದರೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಅವಕಾಶವಿಲ್ಲ. ಹೀಗಾಗಿ ರಿಷಭ್ ಬೇಗ ಚೇತರಿಸಿಕೊಂಡು ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.