IND vs PAK: ಮತ್ತೊಂದು ಭಾರತ ಪಾಕಿಸ್ತಾನ ಕದನಕ್ಕೆ ವೇದಿಕೆ ಸಿದ್ಧ
ಮೊನ್ನೆಯಷ್ಟೇ ಎರಡೂ ತಂಡಗಳು ಎದುರಾದಾಗ ಭಾರತ 7 ವಿಕೆಟ್ ಗಳಿಂದ ಗೆದ್ದಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಪಾಕ್ ಆಟಗಾರ ಕೈಕಲುಕಿಲ್ಲ ಎನ್ನುವುದೇ ದೊಡ್ಡ ಸುದ್ದಿಯಾಗಿತ್ತು. ಇದರ ನಡುವೆ ಪಾಕ್ ತಂಡ ಹೈಡ್ರಾಮಾ ಮಾಡಿಯೂ ಐಸಿಸಿಯಾಗಲೀ ಟೀಂ ಇಂಡಿಯಾಗಲೀ ಬಗ್ಗಲಿಲ್ಲ.
ಇದೀಗ ಮತ್ತೆ ಎರಡೂ ತಂಡಗಳು ಮತ್ತೊಮ್ಮೆ ಅನಿವಾರ್ಯವಾಗಿ ಮುಖಾಮುಖಿಯಾಗಲಿದೆ. ಸೆಪ್ಟೆಂಬರ್ 21 ರಂದು ಎರಡೂ ತಂಡಗಳು ಎದುರಾಗಲಿವೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ತಿರುಗೇಟು ನೀಡುವ ದುಸ್ಸಾಹಸ ಮಾಡುತ್ತದೆಯೇ ಎಂಬುದೇ ಎಲ್ಲರ ಕುತೂಹಲವಾಗಿದೆ.
ಮೊದಲ ಪಂದ್ಯಕ್ಕೇ ಟೀಂ ಇಂಡಿಯಾ ಫ್ಯಾನ್ಸ್ ಬಹಿಷ್ಕಾರ ಹಾಕಿದ್ದರು. ಟಿಕೆಟ್ ಗಳೂ ಎಂದಿನಂತೆ ಬಿಕರಿಯಾಗಿರಲಿಲ್ಲ. ಇದೀಗ ಸೂಪರ್ ಫೋರ್ ಹಂತದ ಪಂದ್ಯಕ್ಕೂ ಬಹಿಷ್ಕಾರದ ಭೀತಿ ಎದುರಾಗಿದೆ.