ಭಾರತ-ಆಸ್ಟ್ರೇಲಿಯಾ ನಡುವೆ ಇಂದು ನಿರ್ಣಾಯಕ ಏಕದಿನ
ಈಗಾಗಲೇ ಸರಣಿ 1-1 ರಿಂದ ಸಮಬಲಗೊಂಡಿದೆ. ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲೊಪ್ಪಿಕೊಂಡಿತು. ಎಲ್ಲಾ ವಿಭಾಗದಲ್ಲೂ ಟೀಂ ಇಂಡಿಯಾ ಕಳೆಗುಂದಿತ್ತು.
ವಿಶೇಷವಾಗಿ ಬ್ಯಾಟಿಂಗ್ ನಲ್ಲಿ ಭಾರತ ಸಿಡಿದೇಳಬೇಕಿದೆ. ಸೂರ್ಯಕುಮಾರ್ ಯಾದವ್ ಕಳೆದ ಎರಡೂ ಪಂದ್ಯಗಳಲ್ಲಿ ವಿಫಲವಾದರೂ ಮತ್ತೊಂದು ಚಾನ್ಸ್ ಸಿಗುವ ಸಾಧ‍್ಯತೆಯಿದೆ. ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ‍್ಯತೆಯಿಲ್ಲ. ಈ ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.