ಡಬ್ಲ್ಯುಪಿಎಲ್: ಕೊನೆಯ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ಎಡವಿದ ಆರ್ ಸಿಬಿ

ಮಂಗಳವಾರ, 21 ಮಾರ್ಚ್ 2023 (17:05 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ಡಬ್ಲ್ಯುಪಿಎಲ್ ಕೂಟದ ಕೊನೆಯ ಪಂದ್ಯವಾಡುತ್ತಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ.

ಪ್ರಬಲ ಮುಂಬೈ ವಿರುದ್ಧ ಕಳೆದ ಪಂದ್ಯದಲ್ಲಿ ಆರ್ ಸಿಬಿ ಹೀನಾಯ ಸೋಲುಂಡಿತ್ತು. ಇಂದಿನ ಪಂದ್ಯ ಗೆದ್ದರೂ ಸೋತರೂ ಆರ್ ಸಿಬಿ ಮುಂದಿನ ಹಂತಕ್ಕೆ ತೇರ್ಗಡೆಯಾಗದು. ಹೀಗಾಗಿ ಇದು ಒಂದು ಔಪಚಾರಿಕ ಪಂದ್ಯವಷ್ಟೇ.

ಕಳೆದ ಪಂದ್ಯದಲ್ಲಿ 99 ರನ್ ಚಚ್ಚಿದ್ದ ಸೋಫಿ ಡಿವೈನ್ ಇಂದು ಶೂನ್ಯಕ್ಕೆ ನಿರ್ಗಮಿಸಿದ್ದು ಆರ್ ಸಿಬಿಗೆ ಹೊಡೆತ ಬಿತ್ತು. ನಾಯಕಿ ಸ್ಮೃತಿ ಮಂಧನಾ 24 ರನ್ ಗಳ ಕೊಡುಗೆ ನೀಡಿದರು. ಅನುಭವಿ ಎಲ್ಸೆ ಪೆರಿ 29 ರನ್ ಗಳಿಸಿದರು.  ರಿಚಾ ಘೋಷ್ ಎಂದಿನಂತೇ ಬಿರುಸಿನ ಆಟವಾಡಿ 29 ರನ್ ಗಳಿಸಿದರು. ಮುಂಬೈಯಂತಹ ಪ್ರಬಲ ತಂಡಕ್ಕೆ ಆರ್ ಸಿಬಿ ಬೌಲರ್ ಗಳು ಅಂಕುಶ ಹಾಕಲು ಯಶಸ್ವಿಯಾಗುತ್ತಾರಾ ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ