ಕೊಹ್ಲಿ ಹೇಳಿದ್ದಕ್ಕೇ ಕೋಚ್ ಹುದ್ದೆಗೆ ಅಪ್ಲೈ ಮಾಡಿದ್ದೆ: ವೀರೇಂದ್ರ ಸೆಹ್ವಾಗ್
ಸಂದರ್ಶನವೊಂದರಲ್ಲಿ ಮಾತನಾಡಿರುವ ಸೆಹ್ವಾಗ್ ಹಳೆಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 2017 ರಲ್ಲಿ ಅನಿಲ್ ಕುಂಬ್ಳೆ-ಕೊಹ್ಲಿ ನಡುವಿನ ವೈಮನಸ್ಯದಿಂದಾಗಿ ಕುಂಬ್ಳೆ ಕೋಚ್ ಹುದ್ದೆಯಿಂದ ಹೊರನಡೆಯುವ ಅನಿವಾರ್ಯತೆ ಎದುರಾಗಿತ್ತು.
ಆಗ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಕೊಹ್ಲಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ನನಗೆ ಸೂಚಿಸಿದರು. ಅನಿಲ್ ಕುಂಬ್ಳೆ ಅವಧಿ ಚಾಂಪಿಯನ್ಸ್ ಟ್ರೋಫಿ ಬಳಿಕ ಮುಕ್ತಾಯವಾಗಲಿದೆ. ನೀವು ಕೋಚ್ ಆಗಿ ಅಧಿಕಾರವಹಿಸಬೇಕು. ನೀವು ವೆಸ್ಟ್ ಇಂಡೀಸ್ ಗೆ ತಂಡದ ಜೊತೆ ಪ್ರಯಾಣಿಸಬೇಕು ಎಂದು ಸೂಚಿಸಿದ್ದರು. ಹಾಗಾಗಿ ನಾನು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ ಎಂದಿದ್ದಾರೆ. ಆದರೆ ಸೆಹ್ವಾಗ್ ಕೋಚ್ ಆಗಿ ಆಯ್ಕೆ ಆಗಲೇ ಇಲ್ಲ.