ಭಾರತ-ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ ಡ್ರಾ

ಭಾನುವಾರ, 19 ಫೆಬ್ರವರಿ 2017 (18:43 IST)
ಮುಂಬೈ: ಭಾರತ ಎ ತಂಡದ ವಿರುದ್ಧ ನಡೆದ ಅಭ್ಯಾಸ ಪಂದ್ಯವನ್ನು ಆಸ್ಟ್ರೇಲಿಯ ಡ್ರಾ ಮಾಡಿಕೊಂಡಿದೆ. ವಿಶೇಷವೆಂದರೆ ಭಾರತ ತಂಡ ಈ ಅಭ್ಯಾಸ ಪಂದ್ಯದ ಮೂಲಕ ಮತ್ತೊಬ್ಬ ಯುವ ಆಟಗಾರನನ್ನು ಕಂಡುಕೊಂಡಿದೆ.

 
22 ವರ್ಷದ ಮುಂಬೈ ಬ್ಯಾಟ್ಸ್ ಮನ್ ಶ್ರೇಯಾಸ್ ಅಯ್ಯರ್ ದ್ವಿಶತಕ ಗಳಸಿದ್ದು ವಿಶೇಷವಾಗಿತ್ತು. 27 ಬೌಂಡರಿ ಸಹಿತ ಮನಮೋಹಕ 202 ರನ್ ಗಳಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾದ ಎಲ್ಲಾ ಬೌಲರ್ ಗಳನ್ನೂ ದಂಡಿಸಿದರು.

ಅತ್ತ ಆಸ್ಟ್ರೇಲಿಯಾಗೂ ಈ ಅಭ್ಯಾಸ ಪಂದ್ಯದ ಮೂಲಕ ಉತ್ತಮ ಬ್ಯಾಟಿಂಗ್ ಪ್ರಾಕ್ಟೀಸ್ ದೊರೆತಂತಾಗಿದೆ. ನಾಯಕ ಸ್ಟೀವ್ ಸ್ಮಿತ್ ಶತಕ ಗಳಿಸಿ ತಮ್ಮ ಬ್ಯಾಟ್ ಒರೆಗೆ ಹಚ್ಚಿದ್ದಾರೆ. ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 469 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತ 403 ಕ್ಕೆ ಆಲೌಟ್ ಆಗಿತ್ತು. ಆಸೀಸ್ ದ್ವಿತೀಯ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ