ಭಾರತ-ಆಸ್ಟ್ರೇಲಿಯಾ ಟಿ20: ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್ ವೆಲ್

ಬುಧವಾರ, 29 ನವೆಂಬರ್ 2023 (08:20 IST)
ಗುವಾಹಟಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿದ್ದ ಮೂರನೇ ಟಿ20 ಪಂದ್ಯವನ್ನು ಆಸೀಸ್ 5 ವಿಕೆಟ್ ಗಳಿಂದ ಗೆದ್ದುಕೊಂಡು ಸರಣಿ ಜೀವಂತವಾಗಿರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಎದುರಾಳಿಗೆ 223 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಬಿರುಗಾಳಿಯಂತಹ ಶತಕದಿಂದಾಗಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿತು. ಮ್ಯಾಕ್ಸ್ ವೆಲ್ ಕೇವಲ 48 ಎಸೆತಗಳಿಂದ 8 ಸಿಕ್ಸರ್ ಸಹಿತ 104 ರನ್ ಚಚ್ಚಿದರು.

ಇದರೊಂದಿಗೆ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದರು. ಇಬ್ಬರೂ ಈಗ ನಾಲ್ಕು ಶತಕ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ ನಲ್ಲಿ ಚೇಸಿಂಗ್ ಮಾಡುವಾಗ ಮೂರು ಶತಕ ಗಳಿಸಿ ಗರಿಷ್ಠ ಶತಕ ಸಿಡಿಸಿದ ದಾಖಲೆ ಮಾಡಿದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸರಣಿಯನ್ನು ಜೀವಂತವಾಗಿರಿಸಿದೆ. ಹಾಗಿದ್ದರೂ ಭಾರತ 2-1 ರಿಂದ ಮುನ್ನಡೆ ಹೊಂದಿದೆ. ಒಂದು ವೇಳೆ ಈ ಪಂದ್ಯ ಗೆಲ್ಲದೇ ಹೋಗಿದ್ದರೆ ಆಸ್ಟ್ರೇಲಿಯಾ ನಿನ್ನೆಯೇ ಸರಣಿ ಕಳೆದುಕೊಳ್ಳಬೇಕಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ