ಭಾರತ-ಆಸೀಸ್ ಟಿ20: ಕೆಎಲ್ ರಾಹುಲ್, ಹಾರ್ದಿಕ್, ಸೂರ್ಯ ಮಿಂಚಿಂಗ್

ಮಂಗಳವಾರ, 20 ಸೆಪ್ಟಂಬರ್ 2022 (20:45 IST)
ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ.

ಭಾರತದ ಪರ ಇಂದು ಕೆಎಲ್ ರಾಹುಲ್ ಆರಂಭದಲ್ಲಿ ಅಬ್ಬರಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಇನಿಂಗ್ಸ್ ಆಡಿದರು. ರಾಹುಲ್ 35 ಎಸೆತಗಳಲ್ಲಿ 55  ರನ್ ಗಳಿಸಿ ಔಟಾದರು. ನಂತರ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ ಚುರುಕಾಗಿ46 ರನ್ ಗಳಿಸಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯರದ್ದೇ ಅಬ್ಬರ. ಕೇವಲ 30 ಎಸೆತಗಳಲ್ಲಿ 71 ರನ್ ಗಳಿಸಿದ ಹಾರ್ದಿಕ್ 5 ಸಿಕ್ಸರ್ ಕೂಡಾ ಸಿಡಿಸಿದರು.

ದಿನೇಶ್ ಕಾರ್ತಿಕ್ ಮತ್ತು ಅಕ್ಸರ್ ಪಟೇಲ್ ತಲಾ 6 ರನ್ ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ 11, ಕೊಹ್ಲಿ ಕೇವಲ 2 ರನ್ ಗೆ ಔಟಾದರು. ಹರ್ಷಲ್ ಪಟೇಲ್ 7 ರನ್ ಗಳಿಸಿ ಅಜೇಯರಾಗುಳಿದರು. ಆಸೀಸ್ ಪರ ನಥನ್ ಎಲ್ಲಿಸ್ 3, ಜೋಶ್ ಹೇಝಲ್ ವುಡ್ 2 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ