ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಮೊದಲು ಬ್ಯಾಟಿಂಗ್ ಮಾಡಿರುವ ಭಾರತದ ವನಿತೆಯರು 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದೆ.
ನಾಯಕಿ ಮಿಥಾಲಿ ರಾಜ್ 61 ರನ್ ಗಳಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ಯಶ್ತಿಕಾ ಭಾಟಿಯಾ 35 ರನ್ ಗಳಿಸಿದರು. ಆದರೆ ಹೊಡೆಬಡಿಯ ಆಟಗಾರ್ತಿಯರಾದ ಶಫಾಲಿ ವರ್ಮ 8 ಮತ್ತು ಸ್ಮೃತಿ ಮಂಥನಾ 16 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ವಿಕೆಟ್ ಕೀಪರ್ ರಿಚಾ ಘೋಷ್ ಅಜೇಯ 32 ರನ್ ಗಳಿಸಿದರು.
ಈಗಾಗಲೇ ದ.ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಸತತವಾಗಿ ಏಕದಿನ ಸರಣಿ ಸೋತಿರು ಮಿಥಾಲಿ ರಾಜ್ ಪಡೆಗೆ ಈ ಸರಣಿ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ.