ಭಾರತ-ಬಾಂಗ್ಲಾ ಪಿಂಕ್ ಟೆಸ್ಟ್: ಇದೂ ಮೂರೇ ದಿನದ ಪಂದ್ಯ!
ನಿನ್ನೆಯ ದಿನದಾಟಕ್ಕೆ ಬಾಂಗ್ಲಾ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದ್ದು, ಭಾರತದ ಮೊದಲ ಇನಿಂಗ್ಸ್ ಮೊತ್ತದ ಹಿನ್ನಡೆ ದಾಟಲು ಇನ್ನೂ 89 ರನ್ ಗಳಿಸಬೇಕಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಪಂದ್ಯದಲ್ಲೂ ಬಾಂಗ್ಲಾ ಇನಿಂಗ್ಸ್ ಅಂತರದ ಸೋಲನುಭವಿಸುವ ಲಕ್ಷಣ ತೋರುತ್ತಿದೆ. ಒಂದು ವೇಳೆ ಬಾಂಗ್ಲಾ ಮುನ್ನಡೆ ಸಾಧಿಸಿದರೂ ದೊಡ್ಡ ಮೊತ್ತದ ಮುನ್ನಡೆಯೇನೂ ಪಡೆಯಲು ಸಾಧ್ಯವಾಗದು. ಇದು ಟೀಂ ಇಂಡಿಯಾಗೆ ಸುಲಭ ತುತ್ತಾಗಲಿದೆ. ಬಾಂಗ್ಲಾ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ 4 ವಿಕೆಟ್ ಕಬಳಿಸಿದರೆ ಉಮೇಶ್ ಯಾದವ್ 2 ವಿಕೆಟ್ ಪಡೆದರು.