ಟಾಸ್ ಸೋಲುವುದರಲ್ಲೂ ವಿರಾಟ್ ಕೊಹ್ಲಿ ದಾಖಲೆ

ಶನಿವಾರ, 27 ಮಾರ್ಚ್ 2021 (09:20 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲೂ ಟಾಸ್ ಸೋತ ವಿರಾಟ್ ಕೊಹ್ಲಿ ಈಗ ಟಾಸ್ ಸೋಲುವುದರಲ್ಲೇ ವೀರನೆನಿಸಿಕೊಂಡಿದ್ದಾರೆ!


ಇಂಗ್ಲೆಂಡ್ ನೊಂದಿಗೆ ಟೆಸ್ಟ್,ಟಿ20, ಏಕದಿನ ಸೇರಿದಂತೆ ಒಟ್ಟು 11 ಪಂದ್ಯಗಳ ಪೈಕಿ ಕೊಹ್ಲಿ 9 ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ. ಪ್ರತೀ ಬಾರಿಯೂ ಕೊಹ್ಲಿಯೇ ಟಾಸ್ ಸೋಲುತ್ತಿರುವುದು ನೋಡಿ ನೆಟ್ಟಿಗರು ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ.

ಕೊಹ್ಲಿ ಟಾಸ್ ಗೆ ಬರುವ ಅಗತ್ಯವೇ ಇಲ್ಲ. ಎದುರಾಳಿ ತಂಡದ ನಾಯಕನಿಗೆ ಬ್ಯಾಟಿಂಗೋ, ಬೌಲಿಂಗೋ ಎಂದು ನೀವೇ ನಿರ್ಧರಿಸಿ ಎಂದು ಬಿಟ್ಟರೆ ಸಮಯವೂ ಉಳಿತಾಯವಾದೀತು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದೇ ಮೊದಲ ಬಾರಿ ಅಲ್ಲ. ಈ ಹಿಂದೆಯೂ ಹಲವು ಸರಣಿಗಳಲ್ಲಿ ಕೊಹ್ಲಿಗೆ ಟಾಸ್ ವಿಚಾರದಲ್ಲಿ ಈ ದುರಾದೃಷ್ಟ ಬೆಂಬಿಡದೇ ಕಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ