ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯದ ಟಿಕೆಟ್ ಸೋಲ್ಡ್ ಔಟ್!
ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಜನವರಿ15 ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯದ ಟಿಕೆಗಳು ಸೋಲ್ಡ್ ಔಟ್ ಆಗಿವೆ. ಡಿಸೆಂಬರ್ 15 ರಿಂದ ಟಿಕೆಟ್ ಮಾರಾಟ ಆರಂಭವಾಗಿತ್ತು.
ಹೀಗಾಗಿ 15 ದಿನಗಳೊಳಗಾಗಿ ಟಿಕೆಟ್ ಗಳು ಖಾಲಿಯಾಗಿವೆ. ಕ್ರಿಸ್ ಮಸ್ ರಜೆಯ ನಂತರ ಭಾರತಕ್ಕೆ ಬರಲಿರುವ ಇಂಗ್ಲೆಂಡ್ ತಂಡ ಮೂರು ಏಕದಿನ ಪಂದ್ಯ ಮತ್ತು ಎರಡು ಟಿ-ಟ್ವೆಂಟಿ ಪಂದ್ಯಗಳನ್ನಾಡಲಿವೆ.