ಭಾರತ-ಇಂಗ್ಲೆಂಡ್ ಟೆಸ್ಟ್: ಮಳೆ ಕಾಟದ ನಡುವೆ ರಾಹುಲ್ ಬೊಂಬಾಟ್ ಆಟ
ಉಳಿದವರದ್ದು ಠುಸ್ ಪಟಾಕಿ. ಚೇತೇಶ್ವರ ಪೂಜಾರ ಮತ್ತೊಮ್ಮೆ ಕಳಪೆ ಆಟವಾಡಿ 4 ರನ್ ಗೆ ಔಟಾದರೆ ನಾಯಕ ಕೊಹ್ಲಿ ಬಂದ ಬಾಲ್ ಗೇ ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದ್ದಾರೆ. ಅಜಿಂಕ್ಯಾ ರೆಹಾನೆ 5 ರನ್ ಗಳಿಸುವಷ್ಟರಲ್ಲಿ ರನೌಟ್ ಗೆ ಬಲಿಯಾಗಿದ್ದಾರೆ. ಇದೀಗ ರಾಹುಲ್ ಜೊತೆಗೆ 7 ರನ್ ಗಳಿಸಿರುವ ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 58 ರನ್ ಗಳಿಸಬೇಕಿದೆ.