ಭಾರತ-ಇಂಗ್ಲೆಂಡ್ ಮಹಿಳೆಯರ ಟೆಸ್ಟ್: ಬೃಹತ್ ಮೊತ್ತ ಪೇರಿಸಿ ಆಂಗ್ಲರಿಗೆ ಆರಂಭಿಕ ಆಘಾತ ನೀಡಿದ ಭಾರತ
ಶುಕ್ರವಾರ, 15 ಡಿಸೆಂಬರ್ 2023 (10:52 IST)
ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮಹಿಳೆಯರ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡ ಮೊದಲ ಇನಿಂಗ್ಸ್ ನಲ್ಲಿ 428 ರನ್ ಗಳಿಗೆ ಆಲೌಟ್ ಆಗಿದೆ.
ಈಗಾಗಲೇ ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಸೋಫಿಯಾ ಡಂಕ್ಲಿಯವರ ಪ್ರಮುಖ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. ಈ ವಿಕೆಟ್ ರೇಣುಕಾ ಸಿಂಗ್ ಪಾಲಾಯಿತು. ಡಂಕ್ಲೀ 11 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದೆ. ಇನ್ನೂ 408 ರನ್ ಗಳ ಹಿನ್ನಡೆಯಲ್ಲಿದೆ.
ಇದಕ್ಕೆ ಮೊದಲು ಮೊದಲ ಇನಿಂಗ್ಸ್ ನಲ್ಲಿ ಭಾರತದ ಪರ ಸಾಲು ಸಾಲು ಅರ್ಧಶತಕಗಳು ದಾಖಲೆಯಾದವು. ಕನ್ನಡತಿ ಶುಭಾ ಸತೀಶ್ 69, ಜೆಮಿಮಾ ರೊಡ್ರಿಗಸ್ 68, ಯಶಿಕಾ ಭಾಟಿಯಾ 66, ದೀಪ್ತಿ ಶರ್ಮಾ 67, ರನ್ ಗಳಿಸಿದರು.
ನಿನ್ನೆ ಮೊದಲ ದಿನದ ಅಂತ್ಯಕ್ಕೆ 410 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದ್ದ ಭಾರತೀಯರು ಇಂದು ದಿಡೀರ್ ಕುಸಿತ ಅನುಭವಿಸಿದರು. ಕೇವಲ 18 ರನ್ ಗಳಿಸುವಷ್ಟರಲ್ಲಿ ಮತ್ತೆ 3 ವಿಕೆಟ್ ಕಳೆದುಕೊಂಡರು. ಹಾಗಿದ್ದರೂ ಭಾರತ ಬೃಹತ್ ಮೊತ್ತ ಪೇರಿಸಿ ಎದುರಾಳಿಗಳಿಗೆ ಸವಾಲೊಡ್ಡಿದೆ.