ವಿರಾಟ್ ಕೊಹ್ಲಿ ಅರ್ಧಕ್ಕೇ ಬಿಟ್ಟ ಕೆಲಸವನ್ನು ಅವರೇ ಪೂರ್ತಿ ಮಾಡುತ್ತಾರಾ?
ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಕೇವಲ ನಾಲ್ಕು ದಿನ ಬಾಕಿಯಿದೆ. ಅಷ್ಟರಲ್ಲಿ ರೋಹಿತ್ ಶರ್ಮಾ ಚೇತರಿಸಿಕೊಳ್ಳದೇ ಇದ್ದರೆ ಆಡಲು ಸಾಧ್ಯವಿಲ್ಲ.
ಹೀಗಾದಲ್ಲಿ ತಂಡದ ನಾಯಕತ್ವ ವಿರಾಟ್ ಕೊಹ್ಲಿ ಅಥವಾ ರಿಷಬ್ ಪಂತ್ ಗೆ ಸಿಗುವ ಸಾಧ್ಯತೆಯಿದೆ. ಕೊಹ್ಲಿ ನೇತೃತ್ವದಲ್ಲಿ ಈ ಟೆಸ್ಟ್ ಸರಣಿಯ ಮೊದಲಾರ್ಧದ ಪಂದ್ಯಗಳನ್ನು ಭಾರತ ಕಳೆದ ವರ್ಷ ಆಡಿತ್ತು. ಭಾರತ ಸರಣಿಯಲ್ಲಿ ಮುನ್ನಡೆಯನ್ನೂ ಸಾಧಿಸಿತ್ತು. ಈಗ ಮತ್ತೆ ಕೊಹ್ಲಿಯೇ ಅಂದು ಅರ್ಧಕ್ಕೇ ಬಿಟ್ಟಿದ್ದ ಕೆಲಸ ಪೂರ್ತಿ ಮಾಡುತ್ತಾರಾ ಎಂದು ಕಾದುನೋಡಬೇಕಿದೆ.