ಭಾರತ-ಐರ್ಲೆಂಡ್ ಟಿ20 ಸರಣಿ ಟೀಂ ಇಂಡಿಯಾ ಪಾಲು
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 58, ಸಂಜು ಸ್ಯಾಮ್ಸನ್ 40, ರಿಂಕು ಸಿಂಗ್ 38 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಐರ್ಲೆಂಡ್ ಪರ ಸ್ಪೋಟಕ ಇನಿಂಗ್ಸ್ ಆಡಿದ ಆರಂಭಿಕ ಆಂಡ್ರ್ಯೂ ಬಾಲ್ ಬ್ರೈನ್ 51 ಎಸೆತಗಳಿಂದ 4 ಸಿಕ್ಸರ್ ಸಹಿತ 72 ರನ್ ಸಿಡಿಸಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗದೇ ಹೋಯ್ತು. ಭಾರತದ ಪರ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ, ರವಿ ಬಿಷ್ಣೋಯ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು. ಉಳಿದೊಂದು ವಿಕೆಟ್ ಅರ್ಷ್ ದೀಪ್ ಸಿಂಗ್ ಪರವಾಯಿತು. ಇದರೊಂದಿಗೆ ಭಾರತ 2-0 ಅಂತರದಿಂದ ಸರಣಿ ಮುನ್ನಡೆ ಪಡೆಯಿತು.