ಸೋಮವಾರ ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ರಾಹುಲ್ ಪಾಸ್, ಅಯ್ಯರ್ ಗೆ ಆತಂಕ
ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗಿದ್ದ ದೊಡ್ಡ ಚಿಂತೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಫಿಟ್ನೆಸ್. ಈ ಪೈಕಿ ರಾಹುಲ್ ಫಿಟ್ನೆಸ್ ಪಾಸ್ ಮಾಡಿಕೊಂಡಿದ್ದಾರೆ. ಆದರೆ ಅಯ್ಯರ್ ಇನ್ನೂ ಸಾಬೀತುಪಡಿಸಿಲ್ಲ.
ಇತ್ತೀಚೆಗೆ ನಡೆದ ಕ್ರಿಕೆಟ್ ಸರಣಿಗಳಲ್ಲಿ ತಿಲಕ್ ವರ್ಮ, ಯಶಸ್ವಿ ಜೈಸ್ವಾಲ್ ಮುಂತಾದ ಯುವ ಕ್ರಿಕೆಟಿಗರನ್ನು ಟೀಂ ಇಂಡಿಯಾ ಕಂಡುಕೊಂಡಿದೆ. ಹೀಗಾಗಿ ಈ ಕ್ರಿಕೆಟಿಗರಿಗೆ ಸ್ಥಾನ ಸಿಗುವ ಸಾಧ‍್ಯತೆಯೂ ಇದೆ. ಉಳಿದಂತೆ ಟೀಂ ಇಂಡಿಯಾದಲ್ಲಿ ಹಿರಿಯರ ಪುನರಾಗಮನವಾಗಲಿದೆ.