ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿದ ಶೊಯೇಬ್ ಅಖ್ತರ್ ಸದ್ದಡಗಿಸಿದ ಗಂಗೂಲಿ
ಸಂದರ್ಶನವೊಂದರಲ್ಲಿ ಅಖ್ತರ್ ಈ ಏಕದಿನ ವಿಶ್ವಕಪ್ ಬಳಿಕ ಕೊಹ್ಲಿ ಏಕದಿನ ಮತ್ತು ಟಿ20 ಗೆ ನಿವೃತ್ತಿ ಹೇಳಿ ಟೆಸ್ಟ್ ಕ್ರಿಕೆಟ್ ಕಡೆಗೆ ಗಮನ ಕೊಡುವುದು ಒಳ್ಳೆಯದು. ಅವರು ಟೆಸ್ಟ್ ಕ್ರಿಕೆಟ್ ಕಡೆಗೆ ಗಮನಹರಿಸಿ ಸಚಿನ್ ತೆಂಡುಲ್ಕರ್ ಅವರ 100 ಶತಕಗಳ ದಾಖಲೆ ಮುರಿಯಲಿ ಎಂದಿದ್ದರು. ಅವರ ಹೇಳಿಕೆ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನೊಂದೆಡೆ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದು, ಯಾಕೆ ನಿವೃತ್ತಿಯಾಗಬೇಕು? ಕೊಹ್ಲಿ ಚೆನ್ನಾಗಿಯೇ ಪ್ರದರ್ಶನ ನೀಡುತ್ತಿದ್ದಾರಲ್ಲಾ? ಕೊಹ್ಲಿ ಎಲ್ಲಿಯವರೆಗೆ ಬಯಸುತ್ತಾರೋ ಅಲ್ಲಿಯವರೆಗೆ ಕ್ರಿಕೆಟ್ ಆಡುತ್ತಿರಲಿ ಎಂದಿದ್ದಾರೆ.