ಭಾರತಕ್ಕೆ ಐಸಿಸಿ ಟಿ20ಯಲ್ಲಿ 2ನೇ ಸ್ಥಾನ, ಏಕದಿನದಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿತ

ಗುರುವಾರ, 5 ಮೇ 2016 (11:59 IST)
ಭಾರತ ಕ್ರಿಕೆಟ್ ತಂಡ ಟಾಪ್ ಟ್ವೆಂಟಿ 20 ತಂಡದಿಂದ ಕೆಳಕ್ಕಿಳಿದಿದ್ದು, ಏಕದಿನ ಪಂದ್ಯಗಳ ಪಂದ್ಯಗಳ ಪಟ್ಟಿಯಲ್ಲಿ ಕೂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇತ್ತೀಚಿನ ಐಸಿಸಿ ಶ್ರೇಯಾಂಕಗಳಲ್ಲಿ ಭಾರತ ಟ್ವೆಂಟಿ 20 ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್‌ಗಿಂತ ಹಿಂದಿದೆ.
 
 ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಏಕ ದಿನ ಶ್ರೇಯಾಂಕದಲ್ಲಿ ಅಗ್ರ 2 ಸ್ಥಾನಗಳನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಮೆಲ್ಬರ್ನ್‌ನಲ್ಲಿ ಐದನೇ ವಿಶ್ವಕಪ್ ಗೆಲುವು ಗಳಿಸಿದ ಆಸ್ಟ್ರೇಲಿಯಾ 124 ಪಾಯಿಂಟ್ ಗಳಿಸಿದ್ದು, ನ್ಯೂಜಿಲೆಂಡ್‌ಗಿಂತ 11 ಪಾಯಿಂಟ್ ಮೇಲಿದೆ.
 
 ದಕ್ಷಿಣ ಆಫ್ರಿಕಾ ಮೂರನೇ ಸ್ಥಾನಕ್ಕೆ ಏರಿದ್ದು, ವೆಸ್ಟ್ ಇಂಡೀಸ್ ಪಾಕಿಸ್ತಾನದ ಸ್ಥಾನವನ್ನು ಆಕ್ರಮಿಸಿಕೊಂಡು ಪಾಕ್ ತಂಡವನ್ನು ಟಾಪ್ 8 ಸ್ಥಾನದಿಂದ ದೂಡಿದೆ.
ಇನ್ನುಳಿದ ತಂಡಗಳ ಪೈಕಿ ಇಂಗ್ಲೆಂಡ್ 6ನೇ ಶ್ರೇಯಾಂಕ, ಬಾಂಗ್ಲಾ ಏಳನೇ ಶ್ರೇಯಾಂಕ, ವೆಸ್ಟ್ ಇಂಡೀಸ್ 8ನೇ ಶ್ರೇಯಾಂಕ ಗಳಿಸಿವೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ