Rohit Sharma: ರೋಹಿತ್ ಶರ್ಮಾ ಕಾಲು ಹಿಡಿದ ಬಾಲ್ ಬಾಯ್: ಹಿಟ್ ಮ್ಯಾನ್ ರಿಯಾಕ್ಷನ್ ವಿಡಿಯೋ ನೋಡಿ
ರಾಜಸ್ಥಾನ್ ವಿರುದ್ಧದ ಪಂದ್ಯವನ್ನು ಮುಂಬೈ 100 ರನ್ ಗಳಿಂದ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 2 ವಿಕೆಟ್ ನಷ್ಟಕ್ಕೆ 217 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ರಾಜಸ್ಥಾನ್ 117 ರನ್ ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ 36 ಎಸೆತದಿಂದ 9 ಬೌಂಡರಿ ಒಳಗೊಂಡಂತೆ 53 ರನ್ ಸಿಡಿಸಿದ್ದರು. ಗೆಲುವಿನ ಬಳಿಕ ರೋಹಿತ್ ಬೌಂಡರಿ ಲೈನ್ ಬಳಿ ನಿಂತಿದ್ದಾಗ ಬಾಲ್ ಬಾಯ್ ಹತ್ತಿರ ಬಂದು ಸೀದಾ ರೋಹಿತ್ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.
ಮೊದಲು ತನ್ನ ಕೈಕುಲುಕಿದ ಹುಡುಗ ಸೀದಾ ತನ್ನ ಕಾಲಿಗೆ ಬಿದ್ದಾಗ ರೋಹಿತ್ ಗಲಿಬಿಲಿಯಾದರು. ತಕ್ಷಣವೇ ಸಾವರಿಸಿಕೊಂಡು ಆತನನ್ನು ಹಿಡಿದೆತ್ತಿ ಬೆನ್ನು ತಟ್ಟಿ ಕಳುಹಿಸಿಕೊಟ್ಟರು. ಈ ವಿಡಿಯೋ ವೈರಲ್ ಆಗಿದೆ.