ಮತ್ತೇ ಪ್ರೀತಿಯಲ್ಲಿ ಬಿದ್ದ ಶಿಖರ್ ಧವನ್, ಕೊನೆಗೂ ತನ್ನ ಪ್ರೀತಿಯನ್ನು ಒಪ್ಪಿಕೊಂಡ ಮಾಜಿ ಕ್ರಿಕೆಟರ್
ಆ ಮಹಿಳೆ ಐರ್ಲೆಂಡ್ ಮೂಲದ ಸೋಫಿ ಶೈನ್ ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ. ಇತ್ತೀಚೆಗಷ್ಟೇ ಧವನ್ ಗೆ ಆ್ಯಂಕರ್ ಒಬ್ಬರು ತಮ್ಮ ಗೆಳತಿ ಮತ್ತು ಆಕೆಯ ಹೆಸರಿನ ಬಗ್ಗೆ ಕೇಳಿದ್ದರು. ಆಂಕರ್‌ನ ಪ್ರಶ್ನೆಗೆ ಧವನ್ ಆರಂಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿದರೆ, ನಂತರ ಅವರು ಹೇಳಿದರು: "ನಾನು ಯಾವುದೇ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಈ ಕೋಣೆಯಲ್ಲಿ ಅತ್ಯಂತ ಸುಂದರವಾಗಿರುವ ಹುಡುಗಿಯೇ ನನ್ನ ಗೆಳತಿ ಎಂದು ಹೇಳಿದ್ದರು. ಈ ವೇಳೆ ಎಲ್ಲ ಕ್ಯಾಮಾರಗಳು ಸೋಫಿಯ ಮೇಲೆ ಕೇಂದ್ರೀಕರಿಸಿತು.