ದ.ಆಫ್ರಿಕಾ ಪ್ರವಾಸದ ಬಗ್ಗೆ ದ್ರಾವಿಡ್ ಚರ್ಚಿಸುತ್ತಾರೆ: ವಿರಾಟ್ ಕೊಹ್ಲಿ

ಗುರುವಾರ, 2 ಡಿಸೆಂಬರ್ 2021 (16:37 IST)
ಮುಂಬೈ: ಮುಂಬರುವ ದ.ಆಫ್ರಿಕಾ ಪ್ರವಾಸದ ಮೇಲೆ ಒಮಿಕ್ರಾನ್ ವೈರಸ್ ಭೀತಿಯಿದೆ. ಆಫ್ರಿಕಾ ನಾಡಿನಲ್ಲಿ ವೈರಸ್ ಹೆಚ್ಚಾಗಿರುವುದರಿಂದ ಅಲ್ಲಿಗೆ ಪ್ರಯಾಣ ಬೆಳೆಸುವ ಬಗ್ಗೆ ಟೀಂ ಇಂಡಿಯಾದಲ್ಲಿ ಗೊಂದಲಗಳಿವೆ.

ಈ ಬಗ್ಗೆ ರಾಹುಲ್ ದ್ರಾವಿಡ್ ಈಗಾಗಲೇ ತಂಡದ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

‘ರಾಹುಲ್ ಭಾಯ್ ಹಿರಿಯ ಆಟಗಾರರೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಅಲ್ಲಿಗೆ ಹೋದ ಬಳಿಕ ಕ್ರಿಕೆಟ್ ಬಿಟ್ಟು ಬೇರೆ ಕಡೆಗೆ ನಮ್ಮ ಗಮನವಿಡುವ ಪರಿಸ್ಥಿತಿ ಬರಬಾರದು. ಅಲ್ಲೇನಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನಮಗೆ ಬೇಕು. ಮಂಡಳಿ ಜೊತೆಗೂ ನಾವು ಮಾತನಾಡುತ್ತಿದ್ದು, ಎರಡು-ಮೂರು ದಿನಗಳಲ್ಲಿ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ’ ಎಂದು ಕೊಹ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ