ಭಾರತ-ನ್ಯೂಜಿಲೆಂಡ್ ಟೆಸ್ಟ್: ಪಿಚ್ ನೋಡಿದ ಅಭಿಮಾನಿಗಳಿಗೆ ತಲೆಬಿಸಿ ಶುರು!

ಗುರುವಾರ, 20 ಫೆಬ್ರವರಿ 2020 (09:55 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಳೆಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ತಯಾರಾದ ಪಿಚ್ ನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋ ಪ್ರಕಟಿಸಿದ್ದು, ಇದನ್ನು ನೋಡಿದ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.


ವೆಲ್ಲಿಂಗ್ಟನ್ ನಲ್ಲಿ ಸಾಮಾನ್ಯವಾಗಿ ಹಸಿರು ಪಿಚ್ ನಿರ್ಮಿಸಲಾಗುತ್ತದೆ. ಆದರೆ ಭಾರತದ ವಿರುದ್ಧದ ಪಂದ್ಯಕ್ಕಂತೂ ಪಿಚ್ ಮೆಲೆ ಸ್ವಲ್ಪ ಹೆಚ್ಚೇ ಎನಿಸುವಷ್ಟು ಹುಲ್ಲು ಇದೆ. ಅಂದರೆ ಈ ಹಸಿರು ಪಿಚ್ ಸಂಪೂರ್ಣವಾಗಿ ವೇಗಿಗಳಿಗೆ ಲಾಭದಾಯಕವಾಗಲಿದೆ. ಇದರಿಂದಾಗಿ ಮೊದಲ ದಿನ ಬ್ಯಾಟಿಂಗ್ ಕಬ್ಬಿಣದ ಕಡಲೆಯಾಗಲಿದೆ.

ಹೀಗಾಗಿ ಪಿಚ್ ನೋಡಿದ ಟ್ವಿಟರಿಗರು, ಈ ಪಿಚ್ ನಲ್ಲಿ ಭಾರತವೇನಾದರೂ ಮೊದಲು ಬ್ಯಾಟಿಂಗ್ ಮಾಡಿದರೆ ಊಟದ ವೇಳೆಗೆ ಅರ್ಧ ತಂಡ ಪೆವಿಲಿಯನ್ ನಲ್ಲಿರಲಿದೆ. ಅಷ್ಟೇ ಅಲ್ಲ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ರನ್ ಗಳಿಸುವುದು ತುಂಬಾ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ