ತಂದೆ ತಕ್ಕ ಮಗ! ಎರಡೇ ತಿಂಗಳಲ್ಲಿ ಎರಡು ದ್ವಿಶತಕ ಸಿಡಿಸಿದ ದ್ರಾವಿಡ್ ಪುತ್ರ ಸಮಿತ್
ಬುಧವಾರ, 19 ಫೆಬ್ರವರಿ 2020 (09:35 IST)
ಬೆಂಗಳೂರು: ಭಾರತೀಯ ಕ್ರಿಕೆಟ್ ನ ವಾಲ್ ಎಂದೇ ಖ್ಯಾತರಾಗಿದ್ದ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್ ನಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವುದರಲ್ಲಿ ಅಸಾಮಾನ್ಯರಾಗಿದ್ದರು. ಅವರಂತೇ ಅವರ ಮಗನೂ ಕ್ರಿಕೆಟ್ ನಲ್ಲಿ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುತ್ತಿದ್ದಾನೆ.
ಕಳೆದ ತಿಂಗಳಷ್ಟೇ ಅಂತರ್ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿಶತಕ ಸಿಡಿಸಿ ಸುದ್ದಿ ಮಾಡಿದ್ದ ಸಮಿತ್ ಈಗ ಮತ್ತೊಮ್ಮೆ ಅದೇ ಪರಾಕ್ರಮ ಮಾಡಿದ್ದಾನೆ. ಅಂಡರ್ 14 ಬಿಟಿಆರ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ಮಲ್ಯ ಅದಿತಿ ಇಂಟರ್ನ್ಯಾಷನಲ್ ಶಾಲೆ ಪರವಾಗಿ ಆಡಿದ ಸಮಿತ್ ದ್ರಾವಿಡ್ ಮತ್ತೊಮ್ಮೆ ದ್ವಿಶತಕ ಸಿಡಿಸಿದ್ದಲ್ಲದೆ ಎರಡು ವಿಕೆಟ್ ಕಿತ್ತು ತಂಡದ ಗೆಲುವಿಗೆ ರೂವಾರಿಯಾಗಿದ್ದಾನೆ.