ಏಷ್ಯಾ ಕಪ್ ಆಸೆಗೆ ಎಳ್ಳು ನೀರು ಬಿಡಲಿರುವ ಪಾಕಿಸ್ತಾನ

ಗುರುವಾರ, 20 ಫೆಬ್ರವರಿ 2020 (09:44 IST)
ಇಸ್ಲಾಮಾಬಾದ್: ಯಾವ ಪ್ರಮುಖ ರಾಷ್ಟ್ರವೂ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಆಸಕ್ತಿ ತೋರುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಭಾರತ ಬಿಲ್ ಕುಲ್ ಪಾಕ್ ಪ್ರವಾಸ ಮಾಡಲ್ಲ. ಹೀಗಾಗಿ ಪಾಕಿಸ್ತಾನ ತನ್ನ ಏಷ್ಯಾ ಕಪ್ ಆತಿಥ್ಯದ ಆಸೆಯನ್ನೇ ಕೈ ಬಿಡುವ ಸಾಧ‍್ಯತೆಯಿದೆ.


ಇದೇ ವರ್ಷ ಸೆಪ್ಟೆಂಬರ್ ನಲ್ಲಿ ಏಷ್ಯಾ ಕಪ್ ಪಾಕಿಸ್ತಾನದಲ್ಲಿ ನಡೆಯುವುದಾಗಿ ನಿರ್ಧಾರವಾಗಿತ್ತು. ಆದರೆ ಈಗಾಗಲೇ ಭಾರತೀಯ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಏಷ್ಯಾ ಕಪ್ ಆಯೋಜಿಸುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ನಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲ್ಲ ಎಂದಿದೆ. ಭಾರತವಿಲ್ಲದೇ ಟೂರ್ನಿ ತೀರಾ ಕಳೆಗುಂದಲಿದೆ.

ಹೀಗಾಗಿ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಜತೆಗೆ ಸಭೆ ನಡೆಸಲಿರುವ ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಣಿ ಈ ವಾರ ನಡೆಯಲಿರುವ ಸಭೆಯಲ್ಲಿ ಟೂರ್ನಮೆಂಟ್ ನಡೆಸುವ ಸ್ಥಳ, ಸಮಯ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ