ಭಾರತ-ನ್ಯೂಜಿಲೆಂಡ್ ಟೆಸ್ಟ್ ಇಂದಿನಿಂದ
ಈ ಪಂದ್ಯದಲ್ಲಿ ಪ್ರಮುಖರ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿಯಲಿದೆ. ಅಜಿಂಕ್ಯಾ ರೆಹಾನೆ ತಂಡದ ನಾಯಕತ್ವ ವಹಿಸಲಿದ್ದಾರೆ. ಆದರೆ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಾದ ಶುಬ್ನಂ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಐಯರ್ ಮುಂತಾದ ಹೊಸಬರಿಗೆ ಅವಕಾಶ ಸಿಗಲಿದೆ.
ಬೌಲಿಂಗ್ ನಲ್ಲಿ ಅನುಭವಿ ಇಶಾಂತ್ ಶರ್ಮಾ ಜೊತೆಗೆ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಬಹಳ ದಿನಗಳ ನಂತರ ಮತ್ತೆ ವೃದ್ಧಿಮಾನ್ ಸಹಾ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಬಹುದು. ಒಟ್ಟಿನಲ್ಲಿ ಭಾರತದ ಯುವ ಆಟಗಾರರಿಗೆ ಇದು ಉತ್ತಮ ವೇದಿಕೆಯಾಗಲಿದೆ. ಈ ಪಂದ್ಯ ಇದೀಗ ಬೆಳಿಗ್ಗೆ 9.30 ಕ್ಕೆ ಆರಂಭವಾಗಲಿದೆ.