ಟೀಂ ಇಂಡಿಯಾಗೀಗ ತ್ರಿಬಲ್ ಆರ್ ಬಲ!

ಬುಧವಾರ, 24 ನವೆಂಬರ್ 2021 (12:10 IST)
ಮುಂಬೈ: ಟೀಂ ಇಂಡಿಯಾದಲ್ಲಿ ಹೊಸ ಶಕೆ ಆರಂಭವಾಗಿದೆ. ಹೊಸ ತಂಡ ಕಟ್ಟುವ ನಿಟ್ಟಿನಲ್ಲಿ ತಂಡಕ್ಕೆ ‘ತ್ರಿಬಲ್ ಆರ್’ ಬಲ ಸಿಕ್ಕಿದೆ. ತ್ರಿಬಲ್ ಆರ್ ಎಂದರೆ ಯಾರು ಅಂತೀರಾ?

ಬೇರೆ ಯಾರೂ ಅಲ್ಲ, ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ, ಕೆಎಲ್ ರಾಹುಲ್.  ವಿರಾಟ್ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ ಮೇಲೆ ತಂಡವನ್ನು ಹೊಸದಾಗಿ ಕಟ್ಟುವ ಹೊಣೆ ಈ ಮೂವರ ಹೆಗಲಿಗೇರಿದೆ.

ರವಿಶಾಸ್ತ್ರಿ ಕೋಚ್ ಸ್ಥಾನದಿಂದ ನಿರ್ಗಮಿಸಿದ ಮೇಲೆ ಕೋಚ್ ಆಗಿ ನೇಮಕವಾಗಿರುವ ದ್ರಾವಿಡ್ ಯುವಕರ ಪಾಲಿನ ಆದರ್ಶ ಆಟಗಾರ. ರೋಹಿತ್ ಕೂಡಾ ತಾಳ್ಮೆಯ ಪ್ರತಿರೂಪ. ಇನ್ನು, ರಾಹುಲ್ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವವರು. ಹೀಗಾಗಿ ಈ ಮೂವರು ತ್ರಿಬಲ್ ಆರ್ ಗಳ ಬಲದಲ್ಲಿ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಲಿ ಎನ್ನುವುದು ಅಭಿಮಾನಿಗಳ ಆಶಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ