ಏಕದಿನ ವಿಶ್ವಕಪ್: ಭಾರತ-ಪಾಕಿಸ್ತಾನ ಪಂದ್ಯ ದಿನ ಬದಲು

ಗುರುವಾರ, 10 ಆಗಸ್ಟ್ 2023 (08:40 IST)
ಮುಂಬೈ: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಈ ಬಾರಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಆ ಪಂದ್ಯದ ದಿನಾಂಕದಲ್ಲಿ ಕೊಂಚ ಬದಲಾವಣೆಯಾಗಿದೆ.

ಈ ಮೊದಲು ಭಾರತ-ಪಾಕಿಸ್ತಾನ ಪಂದ್ಯ ಅಕ್ಟೋಬರ್ 15 ಕ್ಕೆ ಎಂದು ನಿಗದಿಯಾಗಿತ್ತು. ಆದರೆ ಅದೀಗ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 14 ಕ್ಕೆ ನಡೆಯಲಿದೆ.

ಅಕ್ಟೋಬರ್ 5 ರಿಂದ ಆರಂಭವಾಗಲಿರುವ ವಿಶ್ವಕಪ್ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಅದರಂತೆ ಒಟ್ಟು 9 ಪಂದ್ಯಗಳ ದಿನಾಂಕ ಬದಲಾವಣೆಯಾಗಿದೆ. ಈ ಪೈಕಿ ಭಾರತ ಆಡುವ ಎರಡು ಪಂದ್ಯಗಳು ಒಳಗೊಂಡಿವೆ. ನವಂಬರ್ 12 ರಂದು ನಡೆಯಬೇಕಿದ್ದ ಭಾರತ ಮತ್ತು ನೆದರ್ಲ್ಯಾಂಡ್ ನಡುವಿನ ಪಂದ್ಯವೂ ನವಂಬರ್ 11 ಕ್ಕೆ ನಿಗದಿಯಾಗಿದೆ. ಆಗಸ್ಟ್ 25 ರಿಂದ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ