India-SA ODI: ಅರ್ಷ್ ದೀಪ್ ಸಿಂಗ್ ಗೆ ಅಂದು ಅವಮಾನ, ಇಂದು ಸನ್ಮಾನ
ಮೊನ್ನೆಯಷ್ಟೇ ಟಿ20 ಸರಣಿಯಲ್ಲಿ ಅರ್ಷ್ ದೀಪ್ ಸಿಂಗ್ ಸಿಕ್ಕಾಪಟ್ಟೆ ರನ್ ನೀಡಿ ದುಬಾರಿ ಎನಿಸಿಕೊಂಡಾಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಗೊಳಗಾಗಿದ್ದರು.
ಆದರೆ ಇಂದು ಅದೇ ಅರ್ಷ್ ದೀಪ್ ಸಿಂಗ್ ರನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಟೀಂ ಇಂಡಿಯಾದ ಅತ್ಯುತ್ತಮ ಯುವ ವೇಗಿ ಎಂದು ಹೊಗಳುತ್ತಿದ್ದಾರೆ. ಅಂದು ಆದ ಅವಮಾನಕ್ಕೆ ಇಂದು ತಕ್ಕ ಸನ್ಮಾನವೇ ಸಿಗುತ್ತಿದೆ.
ಮೊದಲ ಏಕದಿನ ಪಂದ್ಯದಲ್ಲಿ ಅರ್ಷ್ ದೀಪ್ ಸಿಂಗ್ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ದ.ಆಫ್ರಿಕಾದಲ್ಲಿ 5 ವಿಕೆಟ್ ಕಬಳಿಸಿದ ಭಾರತ ಮೊದಲ ವೇಗಿ ಎಂಬ ದಾಖಲೆಯನ್ನು ಅರ್ಷ್ ದೀಪ್ ಮಾಡಿದ್ದಾರೆ.