India-Australia T20I: ಅಂತಿಮ ಪಂದ್ಯ ಗೆದ್ದು ಟೀಂ ಇಂಡಿಯಾ ಮಾಡಿದ ದಾಖಲೆಗಳು
ಸೋಮವಾರ, 4 ಡಿಸೆಂಬರ್ 2023 (09:19 IST)
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯವನ್ನೂ ಗೆದ್ದು 4-1 ಅಂತರದಿಂದ ಸರಣಿ ಗೆಲುವು ಪಡೆದ ಟೀಂ ಇಂಡಿಯಾ ಮಾಡಿದ ದಾಖಲೆಗಳ ವಿವರ ಇಲ್ಲಿದೆ.
ಈ ಸರಣಿಯಲ್ಲಿ ಸ್ಪಿನ್ನರ್ ಗಳೇ ಮೇಲುಗೈ ಸಾಧಿಸಿದ್ದು ಐದು ಪಂದ್ಯಗಳಿಂದ ಭಾರತದ ಪರ ಸ್ಪಿನ್ನರ್ ಗಳು 15 ವಿಕೆಟ್ ಕಬಳಿಸಿದ್ದರೆ, ಆಸೀಸ್ ಪರ ಸ್ಪಿನ್ನರ್ ಗಳು 6 ವಿಕೆಟ್ ಪಡೆದಿದ್ದರು. ಭಾರತೀಯ ಸ್ಪಿನ್ನರ್ ರವಿ ಬಿಷ್ಣೋಯ್ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ದಾಖಲೆಯನ್ನು ಸಮಗೊಳಿಸಿದರು. ಅಶ್ವಿನ್ ಮತ್ತು ಬಿಷ್ಣೋಯ್ ತಲಾ 9 ವಿಕೆಟ್ ಪಡೆದಿದ್ದಾರೆ.
ಒಂದೇ ತಂಡದ ವಿರುದ್ಧ ಟಿ20 ಕ್ರಿಕೆಟ್ ಮಾದರಿಯಲ್ಲಿ ಗರಿಷ್ಠ ಬಾರಿ ಗೆಲುವು ಕಂಡ ದಾಖಲೆಯ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನ ಪಡೆಯಿತು. ಭಾರತ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ 19 ನೇ ಗೆಲುವು ಇದಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಟಿ20 ಕ್ರಿಕೆಟ್ ನಲ್ಲಿ ರನ್ ಗಳ ಆಧಾರದಲ್ಲಿ ಕಡಿಮೆ ಅಂತರದಲ್ಲಿ ಗೆದ್ದ ಪಂದ್ಯಗಳ ಪಟ್ಟಿಯಲ್ಲಿ ಈ ಗೆಲುವು ಎರಡನೇ ಸ್ಥಾನ ಪಡೆಯಿತು. ಇದಕ್ಕೆ ಮೊದಲು ಭಾರತ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ ನಲ್ಲಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 4 ರನ್ ಗಳ ಗೆಲುವು ಸಾಧಿಸಿತು.