ಭಾರತ-ಲಂಕಾ ದ್ವಿತೀಯ ಏಕದಿನ: ಟೀಂ ಇಂಡಿಯಾದಲ್ಲಿ ಬದಲಾವಣೆ ಇದೆಯಾ?
ಮೊದಲ ಪಂದ್ಯ ಹೈ ಸ್ಕೋರಿಂಗ್ ಪಂದ್ಯವಾಗಿತ್ತು. ಎರಡೂ ತಂಡಗಳೂ 300 ಪ್ಲಸ್ ರನ್ ಗಳಿಸಿದ್ದವು. ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು.
ಇದೀಗ ಇಂದಿನ ಪಂದ್ಯ ಗೆಲ್ಲುವುದು ಶ್ರೀಲಂಕಾಗೆ ಅನಿವಾರ್ಯವಾಗಿದೆ. ಒಂದು ವೇಳೆ ಸೋತರೆ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಶ್ರೀಲಂಕಾ ಭಾರತಕ್ಕೆ ಸುಲಭ ಎದುರಾಳಿಯಲ್ಲ. ಆದರೆ ಬ್ಯಾಟಿಂಗ್ ನಲ್ಲಿ ದಸುನ್ ಶಣಕ, ಮೆಂಡಿಸ್, ಅಸಲಂಕ ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಜೊತೆಗೆ ಕಳೆದ ಪಂದ್ಯದಲ್ಲಿ ಫೀಲ್ಡಿಂಗ್ ಕೈ ಕೊಟ್ಟಿತ್ತು.
ಇತ್ತ ಭಾರತ ತಂಡದಲ್ಲಿ ಈ ಪಂದ್ಯದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಮತ್ತೆ ಬೆಂಚ್ ಕಾಯಿಸಬೇಕಾದೀತು. ಶುಬ್ನಂ ಗಿಲ್ ಕೂಡಾ ಉತ್ತಮ ಲಯದಲ್ಲಿರುವುದರಿಂದ ಇಶಾನ್ ಕಿಶನ್ ಗೆ ಸ್ಥಾನ ಸಿಗದು. ಈ ಪಂದ್ಯ ಮಧ‍್ಯಾಹ್ನ 1.30 ಕ್ಕೆ ಆರಂಭವಾಗಲಿದೆ.