ಜಸ್ಪ್ರೀತ್ ಬುಮ್ರಾ ಮತ್ತೆ ಹೊರಕ್ಕೆ: ಐಪಿಎಲ್ ಗೆ ರೆಡಿಯಾಗ್ತಾರೆ ಬಿಡಿ ಎಂದು ನೆಟ್ಟಿಗರ ಟೀಕೆ
ಆದರೆ ಇನ್ನೂ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದೇ ಇರುವುದರಿಂದ ಮತ್ತೆ ಅವರು ಸರಣಿಯಿಂದ ಹೊರನಡೆದಿದ್ದಾರೆ. ಬುಮ್ರಾ ಮತ್ತೆ ಸರಣಿಯಿಂದ ಹೊರಗುಳಿದಿರುವ ಸುದ್ದಿಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಸದ್ಯಕ್ಕಂತೂ ಅವರು ಫಿಟ್ ಆಗಲ್ಲ. ಐಪಿಎಲ್ ವೇಳೆಗೆ ಫಿಟ್ ಆಗುತ್ತಾರೆ ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ. ಆದರೆ ಅಸಲಿಗೆ ಬುಮ್ರಾ ಬೆನ್ನು ನೋವು ಸುಧಾರಿಸಲು ಇನ್ನೂ ಕೆಲವು ಸಮಯ ಬೇಕು. ಅದಕ್ಕಾಗಿ ಅವರು ಬೆಂಗಳೂರಿನ ಎನ್ ಸಿಎನಲ್ಲಿ ಕಠಿಣ ಪರಿಶ್ರಮಪಡುತ್ತಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.