ಭಾರತ-ಲಂಕಾ ದ್ವಿತೀಯ ಟಿ20 ಇಂದು
ಮೊದಲ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 2 ರನ್ ಗಳಿಂದ ಗೆದ್ದುಕೊಂಡಿತ್ತು. ಇದರಿಂದಾಗಿ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಹೊಂದಿದೆ. ಮೂರು ಪಂದ್ಯಗಳ ಸರಣಿ ಇದಾಗಿರುವುದರಿಂದ ಲಂಕಾಗೆ ಇಂದು ಗೆಲ್ಲಲೇಬೇಕಾದ ಒತ್ತಡವಿದೆ.
ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಅಗ್ರ ಕ್ರಮಾಂಕ ಕೈಕೊಟ್ಟಿತ್ತು. ಶುಬ್ನಂ ಗಿಲ್, ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾಗಿದ್ದರು. ಇದನ್ನು ಸರಿಪಡಿಸಿಕೊಳ್ಳಲು ಅವರಿಗೆ ಇನ್ನೊಂದು ಅವಕಾಶ ಸಿಗಬಹುದು. ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್ 2 ವಿಕೆಟ್ ಕಿತ್ತರೂ ದುಬಾರಿಯೆನಿಸಿದ್ದರು. ಅಕ್ಸರ್ ಪಟೇಲ್ ಮತ್ತೆ ವಿಕೆಟ್ ಕೀಳಲು ಯಶಸ್ವಿಯಾದರೆ ಟೀಂ ಇಂಡಿಯಾ ಬಲಿಷ್ಠವಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7 ಗಂಟೆಗೆ ಆರಂಭವಾಗಲಿದೆ.