ಟೀಂ ಇಂಡಿಯಾದ ಈ ಸ್ಟಾರ್ ಆಟಗಾರರು ಈ ವರ್ಷ ಐಪಿಎಲ್ ಆಡುವುದು ಅನುಮಾನ
ಈ ಕಾರಣಕ್ಕೆ ಕೆಲವು ಪ್ರಮುಖ ಆಟಗಾರರಿಗೆ ಅಗತ್ಯವಿಲ್ಲದ ಪಂದ್ಯಗಳಲ್ಲಿ ಆಡದೇ ಎಚ್ಚರಿಕೆ ವಹಿಸಲು ಸೂಚನೆ ನೀಡಲಿದೆ. ಅಲ್ಲದೆ, ಐಪಿಎಲ್ ನಲ್ಲಿ ಕೆಲವು ಪಂದ್ಯಗಳನ್ನು ಆಡದೇ ಇರಲು ಫ್ರಾಂಚೈಸಿ ಮತ್ತು ಸ್ಟಾರ್ ಆಟಗಾರರಿಗೆ ಸೂಚನೆ ನೀಡಲಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾರನ್ನು ಕೇವಲ ಪ್ರಮುಖ ಪಂದ್ಯಗಳಲ್ಲಿ ಮಾತ್ರ ಆಡಿಸಲು ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚನೆ ನೀಡಲಿದೆ. ಭಾರತದಲ್ಲಿ ನಡೆಯಲಿರುವ 2023 ರ ಏಕದಿನ ವಿಶ್ವಕಪ್ ಗೆಲ್ಲುವುದು ಟೀಂ ಇಂಡಿಯಾಕ್ಕೆ ಪ್ರತಿಷ್ಠೆಯ ವಿಚಾರ. ಹೀಗಾಗಿ ಆಟಗಾರರಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಿಕೊಳ್ಳಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.