ತವರು ನೆಲದಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಭಾರತ, 6 ಹೊಸ ಟೆಸ್ಟ್ ಮೈದಾನಗಳು

ಗುರುವಾರ, 9 ಜೂನ್ 2016 (15:38 IST)
ಬಿಸಿಸಿಐ ತವರು ನೆಲದಲ್ಲಿ ಬಂಪರ್ ಸೀಸನ್ ಪ್ರಕಟಿಸಿದ್ದು, ದೇಶದ ಉದ್ದಗಲಕ್ಕೂ ಟೆಸ್ಟ್ ಕ್ರಿಕೆಟ್ ಆಡಲಾಗುತ್ತದೆ. ಬಿಸಿಸಿಐ 6 ಹೊಸ ಟೆಸ್ಟ್ ಕೇಂದ್ರಗಳನ್ನು ಹೆಸರಿಸಿದ್ದು, ಬಿಸಿಸಿಐ ಅಧ್ಯಕ್ಷರ ನೆಲೆಯಾದ ಧರ್ಮಶಾಲಾ ಕೂಡ ಅವುಗಳಲ್ಲಿ ಸೇರಿದೆ. 
 
 ರಾಜ್‍ಕೋಟ್, ವಿಶಾಖಪಟ್ನಂ, ಪುಣೆ, ಧರ್ಮಶಾಲಾ, ರಾಂಚಿ ಮತ್ತು ಇಂಡೋರ್ ಮುಂಬರುವ ಸೀಸನ್‌ನಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯಗಳನ್ನು ಆಡಿಸಲಿದೆ. ಭಾರತ 13 ಟೆಸ್ಟ್ ಪಂದ್ಯಗಳನ್ನು, 8 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮೂರು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.
 
ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಭಾರತದಲ್ಲಿ ಸರದಿಯಂತೆ ಆಡಲಿದ್ದು, ಬಾಂಗ್ಲಾದೇಶವು ಹೈದರಾಬಾದ್‌ನಲ್ಲಿ ಒಂದು ಟೆಸ್ಟ್ ಪಂದ್ಯವಾಡಲಿದೆ. ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳು ಮತ್ತು ಐದು ಏಕದಿನ ಪಂದ್ಯಗಳೊಂದಿಗೆ ಸುದೀರ್ಘ ಸ್ವದೇಶಿ ಸೀಸನ್ ಆರಂಭವಾಗಲಿದೆ. ಇದರ ಬೆನ್ನ ಹಿಂದೆ ಐದು ಟೆಸ್ಟ್ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ 20 ಪಂದ್ಯಗಳನ್ನು ಭಾರತ ಇಂಗ್ಲೆಂಡ್ ವಿರುದ್ಧ ಆಡಲಿದೆ.

2017ರ ಫೆಬ್ರವರಿ-ಮಾರ್ಚ್2ನಲ್ಲಿ ಆಸ್ಟ್ರೇಲಿಯಾ ಭಾರತ ಪ್ರವಾಸದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಇಂಡೋರ್, ಕಾನ್ಪುರ ಮತ್ತು ಕೊಲ್ಕತಾದಲ್ಲಿ ಆಡಲಾಗುತ್ತದೆ. ಧರ್ಮಶಾಲಾ, ದೆಹಲಿ, ಮೊಹಾಲಿ, ರಾಂಚಿ ಮತ್ತು ವಿಜಾಗ್‌ನಲ್ಲಿ ಏಕದಿನ ಪಂದ್ಯಗಳನ್ನು ಆಡಿಸಲಾಗುತ್ತದೆ.
 
 ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಮೊಹಾಲಿ, ರಾಜಕೋಟ್, ಮುಂಬೈ, ವಿಜಾಗ್ ಮತ್ತು ಚೆನ್ನೈನಲ್ಲಿ ಆಡಲಾಗುತ್ತದೆ. ಏಕದಿನ ಪಂದ್ಯಗಳನ್ನು ಪುಣೆ, ಕಟಕ್ ಮತ್ತು ಕೋಲ್ಕತಾದಲ್ಲಿ ಆಡಲಾಗುತ್ತದೆ. ಬೆಂಗಳೂರು, ಕಾನ್ಪುರ ಮತ್ತು ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಟಿ 20 ಪಂದ್ಯಗಳನ್ನು ಆಡಲಾಗುತ್ತದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೆಂಗಳೂರು, ಧರ್ಮಶಾಲಾ, ರಾಂಚಿ ಮತ್ತು ಪುಣೆಯಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ