ಭಾರತ, ವೆಸ್ಟ್ ಇಂಡೀಸ್ 3ನೇ ದಿನದಾಟ ಮಳೆಯಿಂದ ವಾಷ್ಔಟ್

ಶುಕ್ರವಾರ, 12 ಆಗಸ್ಟ್ 2016 (10:26 IST)
ರಾತ್ರಿ ಸುರಿದ ಗುಡುಗು ಸಹಿತ ಸತತ ಮಳೆಯಿಂದ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಒಂದೇ ಒಂದು ಚೆಂಡನ್ನು ಬೌಲ್ ಮಾಡದೇ ವಾಷ್ ಔಟ್ ಆಗಿದೆ. ಡೆರೆನ್ ಸಾಮಿ ಸ್ಟೇಡಿಯಂನಲ್ಲಿ ಎರಡು ತಂಡಗಳು ಗಡಿಯಾರದಲ್ಲಿ ಭೋಜನವಿರಾಮದ ವೇಳೆ ದಾಟಿದಾಗಲೂ ಮೈದಾನಕ್ಕೆ ಇಳಿಯಲಿಲ್ಲ.
 
 ಇಡೀ ಮೈದಾನದಲ್ಲಿ ನೀರು ನಿಂತು ಕೆಲವು ಕಡೆ ಕೆಸರು ತುಂಬಿದ್ದರಿಂದ ಆಟಕ್ಕೆ ಸೂಕ್ತವಾಗಿರಲಿಲ್ಲ. ಸ್ಥಳೀಯ ಕಾಲಮಾನ 10 ಗಂಟೆಗೆ ಮಳೆ ನಿಂತು ಅಂಪೈರ್‌ಗಳು ಪಿಚ್ ಪರಿಸ್ಥಿತಿ ತಪಾಸಣೆ ನಡೆಸುತ್ತಿದ್ದಂತೆ ಮತ್ತೊಮ್ಮೆ ಮಳೆ ಸುರಿಯಿತು. ಸ್ಥಳೀಯ ಕಾಲಮಾನ 2 ಗಂಟೆಗೆ ಪಿಚ್ಚನ್ನು ಪುನಃ ತಪಾಸಣೆ ನಡೆಸಲಾಯಿತು. ಮಳೆ ನಿಲ್ಲದೇ ಪಿಚ್ ಕಳಪೆ ಸ್ಥಿತಿಯಲ್ಲಿದ್ದಿದ್ದರಿಂದ ಮೂರನೇ ದಿನ ಸಂಪೂರ್ಣ ವಾಷ್‌ಔಟ್ ಆಯಿತು.
 
 ಶುಕ್ರವಾರ ಆಕಾಶ ಶುಭ್ರವಾಗಿದ್ದು ಮಳೆ ಇರದಿದ್ದರೆ ಆಟವನ್ನು ಸ್ಥಳೀಯ ಕಾಲಮಾನ 9.30ಕ್ಕೆ ಆರಂಭಿಸಲಾಗುತ್ತದೆ. ಪಂದ್ಯಕ್ಕೆ ಇನ್ನು 2 ದಿನಗಳು ಮಾತ್ರ ಬಾಕಿವುಳಿದಿದ್ದು ಯಾವುದೇ  ಫಲಿತಾಂಶ ಬರುವ ಸಾಧ್ಯತೆ ಕಡಿಮೆಯಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ