ಭಾರತ-ವಿಂಡೀಸ್ ಟೆಸ್ಟ್: ಕೊಹ್ಲಿಗೆ 76 ನೇ ಶತಕದ ಕನಸು

ಶುಕ್ರವಾರ, 21 ಜುಲೈ 2023 (08:10 IST)
Photo Courtesy: Twitter
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ.

ಟಾಸ್ ಗೆದ್ದ ವಿಂಡೀಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.ಟೀಂ ಇಂಡಿಯಾ ಪರ ಆರಂಭಿಕ ರೋಹಿತ್ ಶರ್ಮಾ 80, ಯಶಸ್ವಿ ಜೈಸ್ವಾಲ್ 57 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಇವರ ವಿಕೆಟ್ ಜೊತೆಗೆ ಶುಬ್ಮನ್ ಗಿಲ್ 10, ಅಜಿಂಕ್ಯಾ ರೆಹಾನೆ ಕೇವಲ 8 ರನ್ ಗಳಿಗೆ ಔಟಾದಾಗ ಭಾರತ ಕೊಂಚ ಸಂಕಷ್ಟಕ್ಕೆ ಸಿಲುಕಿತು.

ಆದರೆ ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ ಜೋಡಿ ಈಗ ಮುರಿಯದ ಐದನೇ ವಿಕೆಟ್ ಗೆ 106 ರನ್ ಗಳ ಜೊತೆಯಾಟವಾಡಿದರು. ಇದೀಗ ವಿರಾಟ್ 87 ರನ್ ಗಳಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು 76 ನೇ ಅಂತಾರಾಷ್ಟ್ರೀಯ ಶತಕ ಗಳಿಸುವ ಭರವಸೆ ಮೂಡಿಸಿದ್ದಾರೆ. ಕೊಹ್ಲಿಗೆ ಇದು 500 ನೇ ಅಂತಾರಾಷ್ಟ್ರೀಯ ಪಂದ್ಯ ಎನ್ನುವುದು ವಿಶೇಷ. ಇನ್ನೊಂದೆಡೆ ಜಡೇಜಾ 36 ರನ್ ಗಳಿಸಿದ್ದು, ಅರ್ಧಶತಕದ ಹೊಸ್ತಿಲಲ್ಲಿದ್ದಾರೆ.  ವಿಂಡೀಸ್ ಪರ ಕೆಮರ್ ರೋಚ್, ಶನನ್ ಗ್ಯಾಬ್ರಿಯಲ್, ಜೊಮೆಲ್ ವಾರಿಕನ್‍ ಮತ್ತು ಜೇಸನ್ ಹೋಲ್ಡರ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ