ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟೆಸ್ಟ್ ಗೆದ್ದರೂ ಭಾರತಕ್ಕೆ ಸಿಗಲಿದೆ 6.7 ಕೋಟಿ ರೂ. ಬಹುಮಾನ’

ಶುಕ್ರವಾರ, 17 ಫೆಬ್ರವರಿ 2017 (20:08 IST)
ಟೆಸ್ಟ್ ಕ್ರಿಕೆಟ್`ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಟೀಮ್ ಇಂಡಿಯಾಗೆ ಅದರ ಫಲ ಸಿಗುವ ಕಾಲ ಸಮೀಪ ಬಂದಿದೆ. ಸತತ 19 ಟೆಸ್ಟ್ ಗೆದ್ದಿರುವ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಫೆಬ್ರವರಿ 23 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ 1 ಪಂದ್ಯ ಗೆದ್ದರೂ ಸಾಕು ಐಸಿಸಿಯಿಂದ ಭರ್ಜರಿ 6.70 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ.


ಪ್ರತಿ ವರ್ಷ ಐಸಿಸಿ ಅಗ್ರ ಸ್ಥಾನ ಕಾಯ್ದುಕೊಂಡ ತಂಡಕ್ಕೆ ಏಪ್ರಿಲ್ 1ಕ್ಕೆ 6.70 ಕೋಟಿ ಬಹುಮಾನ ನೀಡುತ್ತೆ. ಭಾರತ ತಂಡ ಈಗಾಗಲೇ 124 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ 109 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಏಪ್ರಿಲ್ 1ರವರೆಗೆ ಭಾರತ ಅಗ್ರ ಸ್ಥಾನ ಕಾಯ್ದುಕೊಳ್ಳಲು ಒಂದು ಪಂದ್ಯವನ್ನಾದರೂ ಗೆಲ್ಲಬೇಕಿದೆ. ಒಂದೊಮ್ಮೆ ಆಸ್ಟ್ರೇಲಿಯಾ 4-0ಯಿಂದ ಸರಣಿ ಗೆದ್ದರೆ ಭಾರತ ದ್ವಿತೀಯ ಸ್ಥಾನಕಕ್ಕೆಕುಸಿದು, ಕಾಂಗರೂಗಳು ಪ್ರಥಮ ಸ್ಥಾನಕ್ಕೇರಲಿದ್ದಾರೆ. 3-0 ರಿಂದ ಗೆದ್ದರೆ ಉಭಯ ತಂಡಗಳೂ ಅಗ್ರಸ್ಥಾನಕ್ಕೇರುವ ಮೂಲಕ ಬಹುಮಾನ ಹಂಚಿಕೆಯಾಗುತ್ತೆ. ಹೀಗಾಗಿ, ಭಾರತ ಒಂದು ಪಂದ್ಯ ಗೆದ್ದರೂ ಬಹುಮಾನ ತನ್ನದಾಗಿಸಿಕೊಳ್ಳಲಿದೆ.

ಭಾರತ ತಂಡದ ಇತ್ತೀಚಿನ ಫಾರ್ಮ್ ನೋಡಿದರೆ ಈ ಯಾವುದೇ ಲೆಕ್ಕಾಚಾರಕ್ಕೂ ಆಸ್ಪದ ಸಿಗುವುದು ಕಡಿಮೆ. ಭಾರತ 4-0ಯಿಂದ ಸರಣಿ ಗೆಲುವಿನ ವಿಶ್ವಾಸದಲ್ಲಿದೆ.

ವೆಬ್ದುನಿಯಾವನ್ನು ಓದಿ