ಲೆಜೆಂಡ್ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್ ಭೇಟಿ ಮಾಡಿದ ಟೀಂ ಇಂಡಿಯಾ

ಮಂಗಳವಾರ, 19 ಜುಲೈ 2016 (12:04 IST)
ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಆಡಲು ಆಂಟಿಗುವಾಗೆ ಆಗಮಿಸಿದ ಬಳಿಕ ಲೆಜೆಂಡರಿ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್ ಅವರನ್ನು ಭೇಟಿ ಮಾಡಿದರು. ವಿರಾಟ್ ಕೊಹ್ಲಿ, ಶಿಖರ್ ಧವನ್, ಸ್ಟುವರ್ಟ್ ಬಿನ್ನಿ ಮತ್ತು ಅಜಿಂಕ್ಯಾ ರಹಾನೆ ಎಲ್ಲರೂ ವೆಸ್ಟ್ ಇಂಡೀಸ್ ಗ್ರೇಟ್ ಬ್ಯಾಟ್ಸ್‌ಮನ್ ರಿಚರ್ಡ್ಸ್ ಜತೆ ವಿಚಾರವಿನಿಮಯ ನಡೆಸಿದ್ದು, ಇದು ಖಂಡಿತವಾಗಿ ಭಾರತದ ಆಟಗಾರರಿಗೆ ಸ್ಫೂರ್ತಿದಾಯಕವಾಗಿದೆ.

ಭಾರತ ತಂಡವು  ನಾಲ್ಕು ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡದ ಪ್ರವಾಸದಲ್ಲಿದ್ದು,  ಕೊಹ್ಲಿ ತಂಡದ ಸಾರಥ್ಯ ವಹಿಸಿದ್ದಾರೆ. ಕೊಹ್ಲಿ ಕೂಡ ರಿಚರ್ಡ್ಸ್ ಜತೆ ಮುಖಾಮುಖಿ ವಿಚಾರವಿನಿಮಯ ನಡೆಸಿದ್ದು, ಗಹನವಾದ ಸಂವಾದದಲ್ಲಿ ಮುಳುಗಿದ್ದ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ.

ಧವನ್ ಕೂಡ ಬ್ಯಾಟಿಂಗ್ ಗ್ರೇಟ್ ಅವರ ಜತೆ ಭೇಟಿ ಮಾಡಿದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.  ಭಾರತ 2011ರಲ್ಲಿ ಕೊನೆಯದಾಗಿ ಧೋನಿ ನಾಯಕತ್ವದಲ್ಲಿ ಟೆಸ್ಟ್ ಸರಣಿ ಆಡುವುದಕ್ಕಾಗಿ ಕ್ಯಾರಿಬಿಯನ್‌ಗೆ ಭೇಟಿ ಮಾಡಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ