ಏಷ್ಯಾ ಕಪ್: ಟೀಂ ಇಂಡಿಯಾ ಜೆರ್ಸಿ ತೊಟ್ಟ ಭಾರತೀಯರಿಗೆ ಮೈದಾನಕ್ಕೆ ಎಂಟ್ರಿ ಕೊಡದೆ ಅನ್ಯಾಯ!

ಸೋಮವಾರ, 12 ಸೆಪ್ಟಂಬರ್ 2022 (09:50 IST)
ದುಬೈ: ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ಜೆರ್ಸಿ ತೊಟ್ಟು ಮೈದಾನಕ್ಕೆ ಬಂದ ಭಾರತೀಯ ಅಭಿಮಾನಿಗಳಿಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.

ಭಾರತ ಕ್ರಿಕೆಟ್ ತಂಡದ ಅಧಿಕೃತ ಅಭಿಮಾನಿ ಬಳಗ ಭಾರತ್ ಆರ್ಮಿಯ ಸದಸ್ಯರೊಬ್ಬರು ಈ ಬಗ್ಗೆ ಟ್ವಿಟರ್ ನಲ್ಲಿ ಐಸಿಸಿ ಗಮನ ಸೆಳೆದಿದ್ದು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಮೈದಾನದ ಪ್ರವೇಶ ದ್ವಾರಕ್ಕೆ ಬಂದಾಗ ಭಾರತೀಯ ಜೆರ್ಸಿ ತೊಟ್ಟಿದ್ದಾರೆಂಬ ಕಾರಣಕ್ಕೆ ಅಭಿಮಾನಿಗಳಿಗೆ ಪ್ರವೇಶ ನೀಡಿರಲಿಲ್ಲ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ