ಐರ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸುವುದು ಬೇಡ: ಶ್ರೀಜೇಶ್ ಎಚ್ಚರಿಕೆ

ಗುರುವಾರ, 4 ಆಗಸ್ಟ್ 2016 (20:19 IST)
ಭಾರತದ ಹಾಕಿ ನಾಯಕ ಶ್ರೀಜೇಶ್ ತಮ್ಮ ಆರಂಭಿಕ ಪಂದ್ಯದ ಎದುರಾಳಿ ಐರ್ಲೆಂಡ್ ತಂಡವನ್ನು ಹಗುರವಾಗಿ ತೆಗೆದುಕೊಳ್ಳದಂತೆ ತಮ್ಮ ತಂಡಕ್ಕೆ ಎಚ್ಚರಿಸಿದೆ. ರಿಯೋ ಒಲಿಂಪಿಕ್ಸ್‌ಗೆ ಅರ್ಹತಾ ಸುತ್ತಿನಲ್ಲಿ ದೊಡ್ಡ ತಂಡಗಳನ್ನು ಸೋಲಿಸಿ ಐರ್ಲೆಂಡ್ ಆಘಾತ ನೀಡಿರುವುದರಿಂದ ಅದನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
 
ಹಾಕಿ ಸ್ಪರ್ಧೆಯಲ್ಲಿ ಚಿನಕುರುಳಿಗಳಾದ ಐರ್ಲೆಂಡ್ ವಿರುದ್ಧ ಭಾರತ ಆಗಸ್ಟ್ 6 ರಂದು ಒಲಿಂಪಿಕ್ ಅಭಿಯಾನ ಆರಂಭಿಸುತ್ತಿದೆ. ಭಾರತ ಹಾಕಿಯಲ್ಲಿ ತನ್ನ 36 ವರ್ಷಗಳ ಪದಕಗಳ ಬರಕ್ಕೆ ಕೊನೆಹೇಳಲು ಉದ್ದೇಶಿಸಿದ್ದರೆ, ಇದು 1908ರಿಂದೀಚೆಗೆ ಐರ್ಲೆಂಡ್‌ನ ಮೊದಲ ಒಲಿಂಪಿಕ್ ಭಾಗವಹಿಸುವಿಕೆಯಾಗಿದೆ.
 
ಐರ್ಲೆಂಡ್ ಇತ್ತೀಚೆಗೆ ಮಲೇಷ್ಯಾ ಮತ್ತು ಪಾಕಿಸ್ತಾನವನ್ನು ವಿಶ್ವ ಲೀಗ್ ಸೆಮಿಫೈನಲ್ಲಿ ಸೋಲಿಸಿ ಆಸ್ಟ್ರೇಲಿಯಾದ ಒಷಾನಿಕ್ ಕಪ್ ಜಯದ ಮೂಲಕ ರಿಯೊಗೆ ಬರ್ತ್ ಬುಕ್ ಮಾಡಿತ್ತು.

ವೆಬ್ದುನಿಯಾವನ್ನು ಓದಿ