ಏಳನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ ಮಹಿಳಾ ಕ್ರಿಕೆಟ್ ತಂಡ

ಶನಿವಾರ, 15 ಅಕ್ಟೋಬರ್ 2022 (16:19 IST)
Photo Courtesy: Twitter
ಢಾಕಾ: ಶ್ರೀಲಂಕಾ ವಿರುದ್ಧ ನಡೆದ ಮಹಿಳೆಯರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿ ಏಷ್ಯಾಕಪ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿದೆ.

ಇದು ಏಳನೇ ಬಾರಿಗೆ ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಏಷ್ಯಾ ಕ್ರಿಕೆಟ್ ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಬೌಲರ್ ಗಳ ಪೈಕಿ ರೇಣುಕಾ ಶರ್ಮಾ 3, ರಾಜೇಶ್ವರಿ ಗಾಯಕ್ ವಾಡ್, ಸ್ನೇಹ ರಾಣಾ ತಲಾ 2 ವಿಕೆಟ್ ಕಬಳಿಸಿದರು.

ಈ ಸುಲಭ ಮೊತ್ತ ಬೆನ್ನತ್ತಿದ ಹರ್ಮನ್ ಪ್ರೀತ್ ಪಡೆ ಕೇವಲ 8.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 71 ರನ್ ಗಳಿಸುವ ಮೂಲಕ ಗೆಲುವು ಕಂಡಿತು. ಶಫಾಲಿ ವರ್ಮ ಕೇವಲ 5 ರನ್ ಗೆ ವಿಕೆಟ್ ಒಪ್ಪಿಸಿದರೆ ಸ್ಮೃತಿ ಮಂಧನಾ ಎಂದಿನಂತೆ ಭರ್ಜರಿ ಬ್ಯಾಟಿಂಗ್ ನಡೆಸಿ ಅಜೇಯ 51 ರನ್ ಗಳಿಸಿದರು. ಹರ್ಮನ್ ಪ್ರೀತ್ ಕೌರ್ ಅಜೇಯ 11 ರನ್ ಗಳಿಸಿದರು.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ